ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿಯವರನ್ನು ಅತೀವವಾಗಿ ದ್ವೇಷಿಸುತ್ತಿದ್ದ ಪಾಕಿಸ್ತಾನದಲ್ಲೂ ಈಗ ಮೋದಿ ಪರವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ದೇವರೇ ನಮಗೂ ಮೋದಿಯನ್ನು ಕರುಣಿಸು ಎಂದು ಪಾಕಿಸ್ತಾನದ ವ್ಯಕ್ತಿಯೋರ್ವ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಯೂಟ್ಯೂಬರ್ ಸನಾ ಅಮ್ಜದ್ ಅವರು ಪೋಸ್ಟ್ ಮಾಡಿದ ವೈರಲ್ ವೀಡಿಯೊದಲ್ಲಿ, ವ್ಯಕ್ತಿಯೋರ್ವ ನಮಗೆ ಶೆಹಬಾಜ್ ಷರೀಫ್ ಬೇಡ, ಇಮ್ರಾನ್ ಖಾನ್ ಬೇಡ ನಮಗೆ ಕೇವಲ ಮೋದಿ ಬೇಕು ಎಂದಿದ್ದಾನೆ.
ಹಿಂದೆ ಪಾಕಿಸ್ಥಾನ ಮತ್ತು ಭಾರತವನ್ನು ಹೋಲಿಕೆ ಮಾಡಲಾಗುತ್ತಿದ್ದು, ಆದರೀಗ ಹೋಲಿಕೆಯ ಮಾತೇ ಇಲ್ಲ. ಭಾರತ ಅತಿ ಎತ್ತರಕ್ಕೆ ಸಾಗಿದೆ, ಪಾಕಿಸ್ಥಾನ ಕೆಳಕ್ಕಿಳಿದಿದೆ. ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಿರಲಿಲ್ಲ ಎಂದಿದ್ದರೆ ನಾವು ಟೊಮೆಟೊವನ್ನು ಕೆಜಿಗೆ 20 ಪಾಕಿಸ್ಥಾನ ರೂಪಾಯಿಗೆ, ಕೋಳಿ ಮಾಂಸವನ್ನು ಕೆಜಿಗೆ 150 ಪಾಕಿಸ್ಥಾನ ರೂಪಾಯಿಗೆ ಮತ್ತು ಪೆಟ್ರೋಲ್ ಅನ್ನು ಲೀಟರ್ಗೆ 50 ಪಾಕಿಸ್ಥಾನ ರೂಪಾಯಿಗೆ ಖರೀದಿಸುತ್ತಿದ್ದೆವು” ಎಂದು ವೈರಲ್ ವೀಡಿಯೊದಲ್ಲಿ ವ್ಯಕ್ತಿ ಹೇಳಿದ್ದಾನೆ.
“ಮೋದಿ ನಮಗಿಂತ ಉತ್ತಮರು, ಅವರ ಜನರು ಅವರನ್ನು ತುಂಬಾ ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ, ನಮಗೆ ನರೇಂದ್ರ ಮೋದಿ ಇದ್ದರೆ, ನಮಗೆ ನವಾಜ್ ಷರೀಫ್ ಅಥವಾ ಬೆನಜೀರ್ ಅಥವಾ ಇಮ್ರಾನ್ ಅಗತ್ಯವಿರಲಿಲ್ಲ. ನಮಗೆ ಬೇಕಾಗಿರುವುದು ಪ್ರಧಾನಿ ಮೋದಿ, ಏಕೆಂದರೆ ಅವರು ಮಾತ್ರ ದೇಶದ ಎಲ್ಲಾ ನಕಾರಾತ್ಮಕ ಅಂಶಗಳನ್ನು ನಿಭಾಯಿಸಬಲ್ಲರು. ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಆದರೆ ನಾವು ಎಲ್ಲಿಯೂ ಇಲ್ಲ” ಎಂದಿದ್ದಾರೆ.
"Hamen Modi Mil Jaye bus, Na hamen Nawaz Sharif Chahiye, Na Imran, Na Benazir chahiye, General Musharraf bhi nahi chahiye"
Ek Pakistani ki Khwahish 😉 pic.twitter.com/Wbogbet2KF
— Meenakshi Joshi (@IMinakshiJoshi) February 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.