ನವದೆಹಲಿ: ಕೋಲಾಹಲ ಎಬ್ಬಿರುವ ಸಮುದ್ರದಲ್ಲಿ ಭಾರತ ಶಾಂತವಾಗಿರುವ ದ್ವೀಪದಂತೆ ಕಂಡು ಬರುತ್ತಿದೆ ಎನ್ನುವ ಮೂಲಕ ವಿಶ್ವದಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂಬುದನ್ನು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಮಾರಂಭವೊಂದರಲ್ಲಿ ಉದ್ಯಮಿಗಳನ್ನು ಮತ್ತು ಬ್ಯಾಂಕರ್ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ಸುಸ್ಥಿರ ಪ್ರಗತಿಗೆ ಹಲವಾರು ಸುಧಾರಣಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕವಾಗಿ ಆರ್ಥಿಕ ಸಂಕಷ್ಟವಿದ್ದರೂ, ನಮ್ಮ ಪ್ರಗತಿ ಸರಿಯಾದ ಪಥದಲ್ಲೇ ಸಾಗುತ್ತಿದೆ. 2010-11ರಲ್ಲಿ ಇದ್ದ ಸ್ಥಿತಿ ಈಗ ಇಲ್ಲ, ಈಗ ನಾವು ಸಾಕಷ್ಟು ಬದಲಾಗಿದ್ದೇವೆ. ಇಡೀ ವಿಶ್ವವೇ ಆರ್ಥಿಕ ನಿರಾಶ್ರತೆಯಲ್ಲಿದ್ದರೂ, ನಾವು ಸಾಕಷ್ಟು ಶ್ರಮಿಸಿ ನಮ್ಮ ಪರಿಸ್ಥಿತಿಯನ್ನು ಸುಧಾರಿಸಿದ್ದೇವೆ, ಸುಸ್ಥಿರ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 29ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ. ಸಗಟು ಹಣದುಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಡ್ಡಿ ದರ ಕಡಿತ ಮಾಡಬಹುದು ಎಂಬ ನಿರೀಕ್ಷೆ ಉದ್ಯಮ ವಲಯದಲ್ಲಿ ದಟ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.