ನವದೆಹಲಿ: ಇಂದು ತಮ್ಮ 37 ನೇ ರಾಜ್ಯೋತ್ಸವ ಆಚರಿಸುತ್ತಿರುವ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. 1987 ರಲ್ಲಿ ಈ ದಿನದಂದು ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಕೇಂದ್ರಾಡಳಿತ ಪ್ರದೇಶದಿಂದ ರಾಜ್ಯ ಸ್ಥಾನಮಾನವನ್ನು ಪಡೆದುಕೊಂಡವು.
ಅರುಣಾಚಲ ಪ್ರದೇಶ ಚೈತನ್ಯ ಮತ್ತು ದೇಶಪ್ರೇಮಕ್ಕೆ ಸಮಾನಾರ್ಥಕವಾದ ರಾಜ್ಯವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಗೆ ರಾಜ್ಯದ ಜನತೆ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ. ಮುಂಬರುವ ವರ್ಷಗಳಲ್ಲಿ ಅರುಣಾಚಲ ಪ್ರದೇಶವು ಪ್ರಗತಿಯ ಹೊಸ ಎತ್ತರಗಳನ್ನು ಏರಿಸಲಿ ಎಂದು ಮೋದಿ ಪ್ರಾರ್ಥಿಸಿದ್ದಾರೆ.
ಮಿಜೋರಾಂ ಜನತೆಗೆ ಶುಭ ಹಾರೈಸಿದ ಅವರು, ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ಶ್ರಮಜೀವಿಗಳು ಮತ್ತು ಅತ್ಯುತ್ತಮ ಮಿಜೋ ಸಂಸ್ಕೃತಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು. ಮಿಜೋರಾಂ ಜನತೆಯ ಆಕಾಂಕ್ಷೆಗಳು ಮುಂದಿನ ದಿನಗಳಲ್ಲಿಯೂ ಈಡೇರಲಿ ಎಂದು ಪ್ರಧಾನಿ ಆಶಿಸಿದ್ದಾರೆ.
Statehood Day wishes to the people of Arunachal Pradesh, a state synonymous with dynamism and patriotism. The people from the state have contributed to India’s progress in many sectors. I pray that Arunachal Pradesh keeps scaling new heights of progress in the coming years.
— Narendra Modi (@narendramodi) February 20, 2023
Best wishes to the people of Mizoram on their Statehood Day. Mizoram is known for its natural beauty, hardworking people and the outstanding Mizo culture. May the aspirations of the people of Mizoram continue being fulfilled in the coming times.
— Narendra Modi (@narendramodi) February 20, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.