ನವದೆಹಲಿ: ವಿಶ್ವ ಹಿಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪೆಸಿಫಿಕ್ ದ್ವೀಪ ರಾಷ್ಟ್ರವಾದ ಫಿಜಿಗೆ ಮೂರು ದಿನಗಳ ಭೇಟಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ಅಲ್ಲಿನ ಪ್ರಧಾನಿ ಜೊತೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದಾರೆ.
ಅಲ್ಲದೇ ರಾಜತಾಂತ್ರಿಕ ಮತ್ತು ಅಧಿಕೃತ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮನ್ನಾ ಒಪ್ಪಂದವನ್ನು ಘೋಷಿಸಿದ್ದಾರೆ.
ಫಿಜಿ ಪ್ರಧಾನ ಮಂತ್ರಿ ಸಿತಿವೇನಿ ರಬುಕಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಮಹಾನ್ ಹಳೇ ಸ್ನೇಹಿತ ಭಾರತಕ್ಕೆ ಧನ್ಯವಾಗಳು” ಎಂದಿದ್ದಾರೆ. ಅಲ್ಲದೇ ಮಹಾನ್ ಶಕ್ತಿ ಮತ್ತು ಆರ್ಥಿಕತೆಯಾದ ಭಾರತ ನಮ್ಮೊಂದಿಗೆ ಮಾತುಕತೆ ನಡೆಸುತ್ತಿರುವುದು ತುಂಬಾ ಅದೃಷ್ಟದ ವಿಷಯ” ಎಂದಿದ್ದಾರೆ.
ರಬುಕಾ ಅವಲು ಡಿಸೆಂಬರ್ನಲ್ಲಿ ಫಿಜಿಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
” ಭಾರತದ ಜೊತೆ ನಾವು ನಮ್ಮ ಸ್ವಂತ ಸಹಕಾರದ ಬಗ್ಗೆ ಮಾತನಾಡಿದ್ದೇವೆ. ಅಂತಹ ದೊಡ್ಡ ಶಕ್ತಿ ಮತ್ತು ಆರ್ಥಿಕತೆಯು ನಮ್ಮೊಂದಿಗೆ ಮಾತನಾಡುತ್ತಿರುವುದಕ್ಕೆ ನಾವು ತುಂಬಾ ಅದೃಷ್ಟವಂತರು” ಎಂದಿದ್ದಾರೆ.
“ನಮಗೆ ಉತ್ತಮ ಹಳೆಯ ಸ್ನೇಹಿತರಿದ್ದಾರೆ. ಈ ಪ್ರದೇಶದಲ್ಲಿ ನಿಜವಾಗಿಯೂ ಹೊಸ ಸ್ನೇಹಿತರಿಲ್ಲ. ನಾವು ಭಾರತದೊಂದಿಗೆ ಸ್ನೇಹಿತರಾಗಿದ್ದೇವೆ. ನಾವು ಚೀನಾದೊಂದಿಗೆ ಸ್ನೇಹಿತರಾಗಿದ್ದೇವೆ. ನಾವು ನಮ್ಮ ಸಂಬಂಧವನ್ನು ಮುಂದುವರಿಸುತ್ತೇವೆ” ಎಂದು ಚೀನಾವನ್ನು ಮಾತುಕತೆಯಲ್ಲಿ ಚರ್ಚಿಸಲಾಗಿದೆಯೇ ಎಂದು ಕೇಳಿದಾಗ ಅವರು ಹೇಳಿದರು. .
“ಭಾರತವು ಯಾವಾಗಲೂ ವಿಶೇಷ ಸ್ನೇಹಿತ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಹೇಳಲು ಸಂತೋಷವಾಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.