News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

10 ದಿನದಲ್ಲಿ ‌4ನೇ ಬಾರಿಗೆ ಶಂಕಿತ ವಸ್ತುವನ್ನು ಹೊಡೆದುರುಳಿಸಿದ ಯುಎಸ್

ವಾಷಿಂಗ್ಟನ್: ಯು.ಎಸ್ ಸೇನಾ ಫೈಟರ್ ಜೆಟ್‌ಗಳು ಭಾನುವಾರ ಹ್ಯುರಾನ್ ಸರೋವರದ ಮೇಲೆ ಅಷ್ಟಭುಜಾಕೃತಿಯ ವಸ್ತುವೊಂದನ್ನು ಹೊಡೆದುರುಳಿಸಿದವು ಎಂದು ಪೆಂಟಗನ್ ಹೇಳಿದೆ. ಶಂಕಿತ ಚೀನಾದ ಕಣ್ಗಾವಲು ಬಲೂನ್ ಉತ್ತರ ಅಮೆರಿಕದ ಭದ್ರತಾ ಪಡೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಿದೆ.

10 ದಿನಗಳ ಅವಧಿಯಲ್ಲಿ ಅಮೆರಿಕಾ ತನ್ನ ಕ್ಷಿಪಣಿಯಿಂದ ಉತ್ತರ ಅಮೆರಿಕಾದ ಮೇಲೆ ಹೊಡೆದುರುಳಿಸಿದ ನಾಲ್ಕನೇ ಅಪರಿಚಿತ ಹಾರುವ ವಸ್ತು ಇದಾಗಿದೆ. ಅಧ್ಯಕ್ಷ ಜೋ ಬಿಡೆನ್ ಅವರ ಆದೇಶದ ಮೇರೆಗೆ, ಯುಎಸ್ ಎಫ್ -16 ಯುದ್ಧವಿಮಾನವು ನಸುಕಿನ ಜಾವ ವಸ್ತುವನ್ನು ಹೊಡೆದುರುಳಿಸಿತು ಎಂದು ಪೆಂಟಗನ್ ವಕ್ತಾರ ಪ್ಯಾಟ್ರಿಕ್ ರೈಡರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾರುತ್ತಿದ್ದ ವಸ್ತುವು ಮಿಲಿಟರಿ ಬೆದರಿಕೆಯನ್ನು ಉಂಟುಮಾಡದಿದ್ದರೂ, 20,000 ಅಡಿ  ಎತ್ತರದಲ್ಲಿ ಪ್ರಯಾಣಿಸುತ್ತಿದ್ದರಿಂದ ದೇಶೀಯ ವಾಯು ಸಂಚಾರಕ್ಕೆ ಅಡ್ಡಿಪಡಿಸುವ ಆತಂಕವಿತ್ತು ಮತ್ತು ಇದು ಕಣ್ಗಾವಲು ಸಾಮರ್ಥ್ಯಗಳನ್ನು ಹೊಂದಿರಬಹುದು ಎಂಬ ಶಂಕೆ ಇತ್ತು. ಹೀಗಾಗಿ ಅದನ್ನು ಹೊಡೆದುರುಳಸಲಾಗಿದೆ.

ವಸ್ತು ಅಷ್ಟಭುಜಾಕೃತಿಯಂತೆ ಕಾಣುತ್ತಿತ್ತು, ಅದರ ತಂತಿಗಳು ನೇತಾಡುತ್ತಿದ್ದವು ಆದರೆ ಯಾವುದೇ  ಪೇಲೋಡ್ ಹೊತ್ತಂತೆ ಕಾಣುತ್ತಿರಲಿಲ್ಲ ಎಂದು ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top