ಮಂಗಳೂರು : ನಗರದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲಾಮಟ್ಟದ ಶಾರದಾ ಮಹೋತ್ಸವದ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ ೧೪-೦೯-೨೦೧೫ ಸೋಮವಾರದಂದು ನಡೆಯಿತು.
ತೀರ್ಪುಗಾರರಾಗಿ ಶ್ರೀ ರಮಾನಂದ ಭಟ್(ಸಂಸ್ಕೃತ ರಸಪ್ರಶ್ನೆ), ಶ್ರೀಮತಿ ಸುಜಾತಾ ಅರುಣ್, ಶ್ರೀಮತಿ ವೀಣಾ ಕಾರಂತ್(ಭರತನಾಟ್ಯ), ಶ್ರೀ ಮೋಹನ್ ಕುಮಾರ್, ಶ್ರೀ ಡಿ. ಎಸ್. ಶ್ರೀಪತಿ ರಾವ್ (ರಂಗೋಲಿ ಮತ್ತು ಚಿತ್ರಕಲೆ), ಶ್ರೀ ವಸಂತ್ ರಾವ್, ವಿದೂಷಿ ಅರುಣಾ ಕೆ.ಎಸ್, ಭಟ್ (ಕರ್ನಾಟಕ ಶಾಸ್ತ್ರೀಯ ಸಂಗೀತ), ಶ್ರೀಮತಿ ಭಾನುಮತಿ ಸುಮಂತ್ ಕುಮಾರ್, ಕೊರ್ಡೇಲ್ ಸುಬ್ರಹ್ಮಣ್ಯ ರಾವ್(ಭಜನೆ), ಶ್ರೀ ರವಿ ಅಲೆವೂರಾಯ, ಶ್ರೀ ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ (ಏಕವ್ಯಕ್ತಿ ಯಕ್ಷಗಾನ) ಸಹಕರಿಸಿದರು.
ಸ್ಪರ್ಧೆಯ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಎಸ್. ಶ್ರೀಪತಿ ರಾವ್ ಹಾಗೂ ತೀರ್ಪುಗಾರರು ವಿತರಿಸಿದರು. ಸ್ಪರ್ಧಾ ಸಂಯೋಜಕರಾದ ಶ್ರೀ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.