News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸಣ್ಣ ಉಪಗ್ರಹ ಉಡಾವಣಾ ವಾಹಕ(ಎಸ್‌ಎಸ್‌ಎಲ್‌ವಿ-ಡಿ2) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. SSLV-D2 ಮೂರು ಉಪಗ್ರಹಗಳನ್ನು ಹೊತ್ತೊ ನಭಕ್ಕೆ ಚಿಮ್ಮಿದೆ.

ಇದರಲ್ಲಿ ದೇಶದ ವಿವಿಧೆಡೆಯ 750 ವಿದ್ಯಾರ್ಥಿನಿಯರು ನಿರ್ಮಿಸಿದ ಆಜಾದಿ ಸ್ಯಾಟ್‌ ಉಪಗ್ರಹ ಕೂಡಾ ಉಡಾವಣೆಯಾಗಿದೆ.

ಎಸ್‌ಎಸ್‌ಎಲ್‌ವಿ-ಡಿ2 ಉಡಾವಣೆಗೆ ಆರೂವರೆ ಗಂಟೆಗಳ ಕೌಂಟ್‌ಡೌನ್ ಇಂದು ಮುಂಜಾನೆ 2.48 ಕ್ಕೆ ಪ್ರಾರಂಭವಾಯಿತು ಮತ್ತು ಶ್ರೀಹರಿಕೋಟಾದ ಮೊದಲ ಲಾಂಚ್‌ಪ್ಯಾಡ್‌ನಿಂದ ಬೆಳಿಗ್ಗೆ 9.18 ಕ್ಕೆ ಟೇಕಾಫ್ ಆಗಿದೆ.

ಎಸ್‌ಎಸ್‌ಎಲ್‌ವಿ ರಾಕೆಟ್‌ ಇಸ್ರೋದ ಭೂ ವೀಕ್ಷಣಾ ಉಪಗ್ರಹ – ಇಒಎಸ್-07, ಅಮೆರಿಕದ ಅಂಟಾರಿಸ್‌ಗೆ ಸೇರಿದ ಜಾನಸ್-1 ಮತ್ತು ಚೆನ್ನೈನ ಸ್ಪೇಸ್ ಕಿಡ್ಜ್ ಇಂಡಿಯಾಗೆ ಸೇರಿದ ಆಜಾದಿ ಸ್ಯಾಟ್-2 ಅನ್ನು ಹೊತ್ತೊಯ್ದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top