ಬೆಳ್ತಂಗಡಿ: ಸ್ವೀಕರಿಸುವ ಮನಸ್ಸು ಶುದ್ಧವಾಗಿದ್ದರೆ ತಿಳಿದುಕೊಳ್ಳುವ ವಿಚಾರವೂ ಕೂಡ ಅದರ ಪರಿಶುದ್ಧತೆಯನ್ನು ಉಳಿಸಿ ಕೊಳ್ಳುತ್ತದೆ ಎಂದು ರುಡ್ಸೆಟ್ ಸಂಸ್ಥೆಗಳ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆ ರುಡ್ಸೆಟ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಕಂಪ್ಯೂಟರ್ ಹಾರ್ಡ್ವೇರ್ & ನೆಟ್ವರ್ಕಿಂಗ್, ಟಿ.ವಿ ಮತ್ತು ಡಿಜಿಟಲ್ ಎಲೆಕ್ಟ್ರಾನಿಕ್ಸ್ ಸರ್ವಿಸಿಂಗ್ ಹಾಗು ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ತಂಡಗಳ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ರುಡ್ಸೆಟ್ ಸಂಸ್ಥೆ ಕಳೆದ ೩೩ ವರ್ಷಗಳಿಂದಲೂ ಕೂಡ ಇಲ್ಲಿಗೆ ಬರುವ ಶಿಭಿರಾರ್ಥಿಗಳ ಮನಸ್ಸಲ್ಲಿರುವ ಕಲ್ಮಷವನ್ನು ಮೊದಲು ತೆಗೆದು ಹಾಕಿ ನಂತರ ಕೌಶಲ್ಯವನ್ನು ನೀಡಿ ಅವರು ಜೀವನದಲ್ಲಿ ಯಶಸ್ಸನ್ನ ಸಾದಿಸುವಲ್ಲಿ ದೇಶಕ್ಕೇ ಮಾದರಿ ಸಂಸ್ಥೆ ಎನಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭ ಶ್ರೀಮತಿ ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಟಿ.ಪಿ. ಜಗದೀಶ್ಮೂರ್ತಿ ರವರು ಸ್ವಾಗತಿಸಿದರು . ಉಜಿರೆ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜಿತ್ ಕೆ. ರಾಜಣ್ಣವರ್ ವಂದಿಸಿದರು. ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಶ್ರೀಮತಿ ಅನಸೂಯ ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.