News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವ ಭಾರತದಲ್ಲಿ ಹಿಂಸಾಚಾರ ಮತ್ತು ಎಡಪಂಥೀಯ ಉಗ್ರವಾದಕ್ಕೆ ಸ್ಥಾನವಿಲ್ಲ: ಅಮಿತ್‌ ಶಾ

ನವದೆಹಲಿ: ಸ್ವಾವಲಂಬಿ ನವ ಭಾರತದಲ್ಲಿ ಹಿಂಸಾಚಾರ ಮತ್ತು ಎಡಪಂಥೀಯ ಉಗ್ರವಾದಗಳಿಗೆ ಸ್ಥಾನವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಎಡಪಂಥೀಯ ಉಗ್ರವಾದದ ಕುರಿತು ಗೃಹ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ನಿನ್ನೆ ದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸರ್ಕಾರ ಈ ದಿಸೆಯಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದರು.

ಎಡಪಂಥೀಯ ಉಗ್ರವಾದವನ್ನು ಎದುರಿಸಲು ಸರ್ಕಾರದ ನೀತಿಯು ಮೂರು ಮುಖ್ಯ ಸ್ತಂಭಗಳನ್ನು ಆಧರಿಸಿದೆ. ಅವುಗಳೆಂದರೆ – ನಿರ್ದಯ ವಿಧಾನದೊಂದಿಗೆ ಉಗ್ರಗಾಮಿಗಳ ಹಿಂಸಾಚಾರವನ್ನು ನಿಗ್ರಹಿಸುವ ತಂತ್ರ, ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಮತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಎಡಪಂಥೀಯ ಉಗ್ರವಾದಕ್ಕೆ ಬೆಂಬಲವನ್ನು ತೆಗೆದುಹಾಕುವುದು ಎಂದರು.

ಕಳೆದ ಎಂಟು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಸರ್ಕಾರ ಐತಿಹಾಸಿಕ ಯಶಸ್ಸನ್ನು ಕಂಡಿದೆ ಎಂದು ಅವರು ಮಾಹಿತಿ ನೀಡಿದರು.

2022 ರಲ್ಲಿ ಸುಮಾರು ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವಿನ ಸಂಖ್ಯೆಯನ್ನು 100 ಕ್ಕಿಂತ ಕಡಿಮೆಗೊಳಿಸಲಾಗಿದೆ. 2010 ಕ್ಕೆ ಹೋಲಿಸಿದರೆ 2022 ರಲ್ಲಿ ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಹಿಂಸಾತ್ಮಕ ಘಟನೆಗಳಲ್ಲಿ 76 ಪ್ರತಿಶತದಷ್ಟು ಕಡಿತವಗಿದೆ ಎಂದರು.

ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆಯು ಹಿಂದಿನ 90 ರಿಂದ 45 ಕ್ಕೆ ಕಡಿಮೆಯಾಗಿದೆ. ಹೆಚ್ಚು ಪೀಡಿತ  ಜಿಲ್ಲೆಗಳ ಸಂಖ್ಯೆ 2018 ರ ಏಪ್ರಿಲ್‌ನಲ್ಲಿ ಇದ್ದ 35 ರಿಂದ 30 ಕ್ಕೆ ಕಡಿಮೆಯಾಗಿದೆ ಮತ್ತು ಜುಲೈ 2021 ರಿಂದ 25 ಕ್ಕೆ ಕಡಿಮೆಯಾಗಿದೆ ಎಂದು ಶಾ ಹೇಳಿದರು.

ಸರ್ಕಾರ ಎಡಪಂಥೀಯ ಉಗ್ರಗಾಮಿಗಳ ಆರ್ಥಿಕತೆಯನ್ನು ನಾಶ ಮಾಡುವ ಮೂಲಕ ಅವರ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಮಾಡಲು ನಿರ್ಧರಿಸಿದೆ. ಎಡಪಂಥೀಯ ಉಗ್ರಗಾಮಿ ಪೀಡಿತ ಬುಡಕಟ್ಟು ಪ್ರಾಬಲ್ಯದ ಬ್ಲಾಕ್‌ಗಳಲ್ಲಿ ಏಕಲವ್ಯ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top