News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾ.1ರಿಂದ ದೆಹಲಿ ಏಮ್ಸ್‌ನಲ್ಲಿ ʼಮಿಲ್ಲೆಟ್‌ ಕ್ಯಾಂಟೀನ್‌ʼ ಆರಂಭ

ನವದೆಹಲಿ: ಭಾರತದಲ್ಲಿ ಸಿರಿಧಾನ್ಯಗಳ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಅವುಗಳ ಆರೋಗ್ಯಕಾರಕ ಗುಣಗಳನ್ನು ಅರಿತುಕೊಳ್ಳುತ್ತಿರುವ ಜನರು ಅದನ್ನು ಹೆಚ್ಚು ಹೆಚ್ಚು ಬಳಸಲು ಮುಂದಾಗುತ್ತಿದೆ. ಭಾರತ ಸರ್ಕಾರವು 2023 ನೇ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷʼ ಎಂದು ಆಚರಿಸಲು ನಿರ್ಧರಿಸಿರುವುದರಿಂದ ಸಿರಿಧಾನ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ದೇಶದಾದ್ಯಂತ ಹೆಚ್ಚುತ್ತಿದೆ.

ನವದೆಹಲಿಯ ಏಮ್ಸ್‌ನಲ್ಲಿ ʼಮಿಲ್ಲೆಟ್‌ ಕ್ಯಾಂಟೀನ್‌ʼ ಕಾರ್ಯಾರಂಭ ಮಾಡಲಾಗುವುದು ಎಂದು ಏಮ್ಸ್‌ ಸಂಸ್ಥೆ ತಿಳಿಸಿದೆ. ಭಾರತೀಯ ಸಿರಿಧಾನ್ಯಗಳು, ಪಾಕವಿಧಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜಾಗತಿಕವಾಗಿ ಪ್ರಚಾರ ಮಾಡಲು 2023 ನೇ ವರ್ಷವನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಸಿರಿಧಾನ್ಯಗಳಲ್ಲಿ ಪ್ರೋಟೀನ್, ಫೈಬರ್, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿರುವುದರಿಂದ ಅವು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಇದೇ ಕಾರಣಕ್ಕೆ ಸಿರಿಧಾನ್ಯ ಕ್ಯಾಂಟೀನ್‌ ಆರಂಭಿಸಲಾಗುವುದು ಎಂದು ಏಮ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ

ದೆಹಲಿ ಏಮ್ಸ್‌ನ ಸೆಂಟ್ರಲ್ ಕೆಫೆಟೇರಿಯಾದ 2 ನೇ ಮಹಡಿಯಲ್ಲಿ ‘ಮಿಲ್ಲೆಟ್ ಕ್ಯಾಂಟೀನ್’ ಅನ್ನು ಪ್ರಾರಂಭಿಸಲಾಗುವುದು. ಈ ಕ್ಯಾಂಟೀನ್ 24×7 ಆಧಾರದಲ್ಲಿ ಸಿರಿಧಾನ್ಯ ಆಧಾರಿತ ಭಕ್ಷ್ಯಗಳನ್ನು ನೀಡುತ್ತದೆ. ಮಾರ್ಚ್1 ರೊಳಗೆ ಇದು ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top