News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2 ದಿನಗಳ ಇ-ಹರಾಜಿನಲ್ಲಿ 9 ಲಕ್ಷ ಟನ್ ಗೋಧಿ ಮಾರಾಟ ಮಾಡಿದ FCI

ನವದೆಹಲಿ: ಭಾರತೀಯ ಆಹಾರ ನಿಗಮವು ಎರಡು ದಿನಗಳ ಇ-ಹರಾಜಿನಲ್ಲಿ ಒಂಬತ್ತು ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಿದೆ. ಎಫ್‌ಸಿಐ ಕೇಂದ್ರೀಯ ಭಂಡಾರದಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ವಿವಿಧ ಮಾರ್ಗಗಳ ಮೂಲಕ ಮಾರುಕಟ್ಟೆಗೆ ಇ-ಹರಾಜಿಗಾಗಿ 22 ಲಕ್ಷ ಟನ್ ಗೋಧಿಯನ್ನು ನೀಡಿದೆ.

ದೇಶದಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಅಟ್ಟಾ ಬೆಲೆಯನ್ನು ತಗ್ಗಿಸಲು ಈ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇ-ಹರಾಜಿನಲ್ಲಿ, ಮೊದಲ ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಿಡ್‌ದಾರರು ಭಾಗವಹಿಸಲು ಮುಂದೆ ಬಂದರು ಮತ್ತು ದೇಶಾದ್ಯಂತ 9 ಲಕ್ಷದ 20 ಸಾವಿರ ಟನ್‌ಗಳಷ್ಟು ಪ್ರಮಾಣದಲ್ಲಿ ಗೋಧಿ ಮಾರಾಟವಾಗಿದೆ.

ಇ-ಹರಾಜಿನ ಮೂಲಕ ಗೋಧಿಯ ಮಾರಾಟವು ಮಾರ್ಚ್ 2023 ರ 2 ನೇ ವಾರದವರೆಗೆ ಪ್ರತಿ ಬುಧವಾರದಂದು ದೇಶಾದ್ಯಂತ ಮುಂದುವರಿಯುತ್ತದೆ ಎಂದು ಸಚಿವಾಲಯ ಹೇಳಿದೆ.

ಕಳೆದ ಒಂದು ವಾರದಿಂದ ಇ-ಹರಾಜು  ಗೋಧಿಯ ಮಾರುಕಟ್ಟೆ ಬೆಲೆಯಲ್ಲಿ ಶೇಕಡಾ ಹತ್ತಕ್ಕಿಂತ ಹೆಚ್ಚು ಕುಸಿತಕ್ಕೆ ಕಾರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top