ಬೆಳ್ತಂಗಡಿ: ನಾವು ಹಿಂದುಗಳು ಬಹುಸಂಖ್ಯಾತರಾಗಿಯೇ ಉಳಿಯಬೇಕಾದರೆ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಇನ್ನಷ್ಟು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗಬೇಕು ಎಂದು ಲಾಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದರು.
ಅವರು ಗುರುವಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕುತ್ಲೂರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆದ ಮೊದಲನೇ ಸಾರ್ವಜನಿಕ ಶ್ರೀ ಗಣೇಶೋತ್ಸವದಧಾರ್ಮಿಕ ಮತ್ತು ಬಹುಮಾನ ವಿತರಣಾ ಸಭೆಯಲ್ಲಿ ಧಾರ್ಮಿಕಉಪನ್ಯಾಸ ನೀಡಿದರು.
ದೇವಸ್ಥಾನಗಳ ಉನ್ನತಿ, ಉಳಿವು ಬಹುಸಂಖ್ಯಾತರ ಕೈಯಲ್ಲಿದೆ. ಹೀಗಾಗಿ ಮುಂದಿನ ಪೀಳಿಗೆಯೂ ದೇವರು, ದೇವಳಗಳತ್ತ ಮುಖ ಮಾಡಬೇಕಿದ್ದರೆ ಮಕ್ಕಳಿಗೆ ಅದರ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇದರಲ್ಲಿ ಮಾತೆಯರ ಜವಾಬ್ದಾರಿ ಹೆಚ್ಚಿದೆಎಂದರು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಕೆ.ಶಶಿಕಾಂತ ಅರಿಗ ಪಾಂಡ್ಯೆರೆಗುತ್ತು ವಹಿಸಿದ್ದರು.ಮರೋಡಿ ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರದೇವೇಂದ್ರ ಹೆಗ್ಡೆ ಅವರುಕಬಡ್ಡಿ, ಹಗ್ಗಜಗ್ಗಾಟ, ಸಂಗೀತಕುರ್ಚಿ, ಚೆಂಡುಎಸೆತ, ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಅತಿಥಿಗಳಾಗಿ ನಾರಾವಿ ಗ್ರಾ.ಪಂ.ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಮಲೇರಿಯಾ ಜಿಲ್ಲಾ ನಿವೃತ್ತ ಅಧಿಕಾರಿಡಾ|ಮಂಜುನಾಥ ಕಾಮತ್, ನಾರಾವಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಆನಂದ ಸದ್ಗುಳ್, ಉದ್ಯಮಿಗಳಾದ ಪ್ರೇಮ್ಕುಮಾರ್, ಸುರೇಂದ್ರಕುಮಾರ್ ಜೈನ್,ಸಾಹಿತಿ ಬಾಬು ಶೆಟ್ಟಿ ಉಪಸ್ಥಿತರಿದ್ದರು.
ಬೆಳಿಗ್ಗೆ ನಾರಾವಿ ಲಯನ್ಸ್ಕ್ಲಬ್ ಅಧ್ಯಕ್ಷ ಹಾಗೂ ಸಮಿತಿಗೌರವ ಸಲಹೆಗಾರ ರಾಮಚಂದ್ರ ಭಟ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಹರೀಶ್ ಪಾರೊಟ್ಟು ವಂದಿಸಿದರೆ, ಸಮಿತಿ ಕಾರ್ಯದರ್ಶಿ ಸತೀಶ್ ಸಮೃದ್ಧಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.