News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊಬೈಲ್ ಆಪರೇಟಿಂಗ್ ಸಿಸ್ಟಮ್ ‘BharOS’ ಅಭಿವೃದ್ಧಿಪಡಿಸಿ ಐಐಟಿ ಮದ್ರಾಸ್‌ನ ಸಂಸ್ಥೆ

ನವದೆಹಲಿ: ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿಯೊಂದಿಗೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್-ಇನ್‌ಕ್ಯುಬೇಟೆಡ್ ಸಂಸ್ಥೆಯು ಭಾರತದಲ್ಲಿನ 100 ಕೋಟಿ ಸೆಲ್‌ಫೋನ್ ಬಳಕೆದಾರರಿಗೆ ಅನುಕೂಲವಾಗುವಂತಹ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ‘BharOS’ ಅನ್ನು ಅಭಿವೃದ್ಧಿಪಡಿಸಿದೆ.

ಐಐಟಿ ಮದ್ರಾಸ್ ಸ್ಥಾಪಿಸಿದ ಕಂಪನಿಯಾದ JandK ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್‌ ಸ್ಥಳೀಯವಾಗಿ  ಅಭಿವೃದ್ಧಿಪಡಿಸಿರುವ BharOS ದೇಶದಲ್ಲಿ ದೃಢವಾದ ಸ್ಥಳೀಯ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಕಂಪನಿಯು ಈ ಬಗ್ಗೆ ಹೇಳಿಕೆ ನೀಡಿದ್ದು, ಸಾಫ್ಟ್‌ವೇರ್ ಅನ್ನು ಕಮರ್ಷಿಯಲ್ ಆಫ್-ದಿ-ಶೆಲ್ಫ್ ಹ್ಯಾಂಡ್‌ಸೆಟ್‌ಗಳಲ್ಲಿ ಸ್ಥಾಪಿಸಬಹುದು, ಇದು ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ. BharOS ನೋ ಡೀಫಾಲ್ಟ್ ಅಪ್ಲಿಕೇಶನ್‌ಗಳೊಂದಿಗೆ (NDA) ಬರುತ್ತದೆ, ಅಂದರೆ ಬಳಕೆದಾರರು ತಮಗೆ ಪರಿಚಯವಿಲ್ಲದ ಅಥವಾ ಅವರು ನಂಬದಿರುವ ಅಪ್ಲಿಕೇಶನ್‌ಗಳನ್ನು ಬಳಸಲು ಬಲವಂತಪಡಿಸಲಾಗುವುದಿಲ್ಲ ಎಂದಿದೆ.

ಬಳಕೆದಾರರು ತಮ್ಮ ಅಗತ್ಯಗಳಿಗೆ ಸರಿಹೊಂದುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಮತ್ತು ಬಳಸಲು ಹೆಚ್ಚಿನ ಸ್ವಾತಂತ್ರ್ಯ, ನಿಯಂತ್ರಣವನ್ನು ಪಡೆಯುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top