ನವದೆಹಲಿ: ಮಾಧ್ಯಮ ಮತ್ತು ಮನರಂಜನಾ ದೈತ್ಯ Viacom18 ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಧ್ಯಮ ಹಕ್ಕನ್ನು ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, Viacom18 ಮುಂದಿನ ಐದು ವರ್ಷಗಳವರೆಗೆ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಗೆದ್ದಿದೆ.
ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಶಾ ಟ್ವಿಟರ್ ಮೂಲಕ ಈ ಘೋಷಣೆ ಮಾಡಿದ್ದಾರೆ. ಪೋಸ್ಟ್ನಲ್ಲಿ, ವಯಾಕಾಮ್ 18 ಈ ಹಕ್ಕುಗಳನ್ನು 951 ಕೋಟಿ ರೂ.ಗೆ ಗೆದ್ದಿದೆ ಎಂದು ಶಾ ಉಲ್ಲೇಖಿಸಿದ್ದಾರೆ.
ಇದರರ್ಥ ಒಂದು ಪಂದ್ಯಕ್ಕೆ 7.09 ಕೋಟಿ ರೂಪಾಯಿಗಳಿಗೆ ಮಾಧ್ಯಮ ಹಕ್ಕನ್ನು ಇದು ಪಡೆದುಕೊಂಡಿದೆ. ಘೋಷಣೆಯ ಪ್ರಕಾರ, Viacom18 ಪ್ರತ್ಯೇಕವಾಗಿ 2023 ರಿಂದ 2027 ರವರೆಗೆ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಹೊಂದಿರುತ್ತದೆ. ಈಗಾಗಲೇ ಅದು ಪುರುಷರ ಐಪಿಎಲ್ ಮಾಧ್ಯಮ ಹಕ್ಕನ್ನು ಹೊಂದಿದೆ.
Congratulations @viacom18 for winning the Women’s @IPL media rights. Thank you for your faith in @BCCI and @BCCIWomen. Viacom has committed INR 951 crores which means per match value of INR 7.09 crores for next 5 years (2023-27). This is massive for Women’s Cricket 🙏🇮🇳
— Jay Shah (@JayShah) January 16, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.