News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊನೆಗೂ ಸಿಕ್ಕಿತು ವಿದ್ಯುತ್‌ ಸಂಪರ್ಕ: ಕಾಶ್ಮೀರ ಗ್ರಾಮದ ಜನರಿಂದ ಸರ್ಕಾರಕ್ಕೆ ಧನ್ಯವಾದ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಡೂರು ​​ಬ್ಲಾಕ್‌ನಲ್ಲಿರುವ ದೂರದ ಗ್ರಾಮವಾದ ಟೆಥಾನ್‌ನ ನಿವಾಸಿಗಳು ಜನವರಿ 8 ರಂದು ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರ ವಿದ್ಯುತ್‌ ದೀಪಗಳನ್ನು ಕಂಡ  ಗ್ರಾಮದ ಜನರದಲ್ಲಿ ಸಂತೋಷದ ಭಾವನೆ ಮೂಡಿದೆ.

ಸರಿಸುಮಾರು 200 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವು 75 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಮೊದಲ ಬಲ್ಬ್ ಅನ್ನು ಬೆಳಗಿಸಿತು. ಇದುವರೆಗೆ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರಲಿಲ್ಲ, ಇಲ್ಲಿನ ಮನೆಗಳು ಕತ್ತಲೆಯಲ್ಲಿ ಮುಳುಗಿದ್ದವು. ದೀಪಗಳು ಮತ್ತು ಕ್ಯಾಂಡಲ್‌ಲೈಟ್‌ಗಳು ಇವರ ಬೆಳಕಿನ ಮೂಲವಾಗಿತ್ತು.

ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

“ನಾವು ಇಂದು ಮೊದಲ ಬಾರಿಗೆ ವಿದ್ಯುತ್ ಅನ್ನು ನೋಡಿದ್ದೇವೆ. ನಮ್ಮ ಮಕ್ಕಳು ಈಗ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ” ಎಂದು ಗ್ರಾಮದ ನಿವಾಸಿ ಫಜುಲ್-ಉ-ದಿನ್ ಖಾನ್ ಹೇಳಿದ್ದಾರೆ.

ಖಾನ್ ಪ್ರಕಾರ, ಹಳ್ಳಿಗರು ವಿದ್ಯುತ್‌ ಇಲ್ಲದ ಕಾರಣ ಹಲವಾರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ.

“ನಾವು ಇಲ್ಲಿಯವರೆಗೆ ನಮ್ಮ ವಿದ್ಯುತ್ ಅವಶ್ಯಕತೆಗಳಿಗಾಗಿ ಸಾಂಪ್ರದಾಯಿಕ ವಿಧಾನವನ್ನು ಅವಲಂಬಿಸಿದ್ದೇವೆ. ನಮ್ಮ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ. ವಿದ್ಯುತ್ ಒದಗಿಸಿದ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.

ಟೆಥಾನ್ ಅನಂತನಾಗ್‌ನ ಬೆಟ್ಟಗಳ ಮೇಲೆ ನೆಲೆಸಿದೆ ಮತ್ತು ಅದು ದೂರದ ಗ್ರಾಮವಾದ ಕಾರಣ ಅಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳು ಮತ್ತು ವಿದ್ಯುತ್‌ನಂತಹ ಅಗತ್ಯಗಳನ್ನು ಹೊಂದಿಲ್ಲ.  ಆದರೀಗ ಅವರ ಜೀವನ ನಿಧಾನಕ್ಕೆ ಬದಲಾಗುತ್ತಿದೆ.

ಅನಂತನಾಗ್ ಪಟ್ಟಣದಿಂದ 45 ಕಿಲೋಮೀಟರ್ ದೂರದಲ್ಲಿರುವ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿದ್ಯುತ್ ಇಲಾಖೆ ಮತ್ತು ಜಿಲ್ಲಾಡಳಿತದ ಪ್ರಯತ್ನಗಳನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top