News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಸಮಾಜ ಮತ್ತು ವಿಜ್ಞಾನದ ಪ್ರಗತಿಯ ಪ್ರತಿಬಿಂಬ: ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 108 ನೇ ಆವೃತ್ತಿಯ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ISC ಯ ಐದು ದಿನಗಳ 108 ನೇ ಅಧಿವೇಶನವು ಅಮರಾವತಿ ರಸ್ತೆಯ ಕ್ಯಾಂಪಸ್‌ನಲ್ಲಿರುವ ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ.

ಈ ಅಧಿವೇಶನದ ಮುಖ್ಯ ಥೀಮ್ ‘ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’‌ ಎಂಬುದಾಗಿದೆ.

“ವಿಜ್ಞಾನವು ಭಾರತವನ್ನು ಆತ್ಮನಿರ್ಭರಗೊಳಿಸಬೇಕು. ಪ್ರಯೋಗಾಲಯದಿಂದ ಭೂಮಿಗೆ ಹೋದಾಗ ಮಾತ್ರ ವಿಜ್ಞಾನದ ಪ್ರಯತ್ನಗಳು ಫಲ ನೀಡಬಲ್ಲವು. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗಿದೆ. ವಿಜ್ಞಾನದ ಬಳಕೆಯಿಂದ ಭಾರತದ ಸಿರಿಧಾನ್ಯ ಮತ್ತು ಅವುಗಳ ಬಳಕೆಯನ್ನು ಇನ್ನಷ್ಟು ಸುಧಾರಿಸಬೇಕು” ಎಂದು ಅವರು ಹೇಳಿದರು.

21 ನೇ ಶತಮಾನದ ಭಾರತದಲ್ಲಿ, ನಮಗೆ ಎರಡು ವಿಷಯಗಳು ಸಾಕಷ್ಟು ಇವೆ . ಅದೆಂದರೆ ಡಾಟಾ ಮತ್ತು ತಂತ್ರಜ್ಞಾನ. ಇವುಗಳು ಭಾರತದ ವಿಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲವು. ದತ್ತಾಂಶ ವಿಶ್ಲೇಷಣೆಯು ವೇಗವಾಗಿ ಮುಂದಕ್ಕೆ ಸಾಗುತ್ತಿದೆ. ಇದು ಮಾಹಿತಿಯನ್ನು ಒಳನೋಟಕ್ಕೆ ಮತ್ತು ವಿಶ್ಲೇಷಣೆಯನ್ನು ಕ್ರಿಯಾಶೀಲ ಜ್ಞಾನವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.

”ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಸಮಾಜ ಮತ್ತು ವಿಜ್ಞಾನದ ಪ್ರಗತಿಯ ಪ್ರತಿಬಿಂಬವಾಗಿದೆ” ಎಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಕೇವಲ ವಿಜ್ಞಾನದ ಮೂಲಕ ಮಹಿಳೆಯರು ಸಬಲೀಕರಣಗೊಳ್ಳಬೇಕು ಎಂಬುದೇ ದೇಶದ ಉದ್ದೇಶವಲ್ಲ, ಮಹಿಳೆಯರ ಸಹಭಾಗಿತ್ವದೊಂದಿಗೆ ವಿಜ್ಞಾನವೂ ಸಬಲೀಕರಣಗೊಳ್ಳಬೇಕು, ವಿಜ್ಞಾನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.

“ವಿಜ್ಞಾನದ ಪ್ರಯತ್ನಗಳು ‘ಲ್ಯಾಬ್‌ನಿಂದ ಭೂಮಿಗೆ’ ತಲುಪಿದಾಗ ಮತ್ತು ಅವುಗಳ ಪ್ರಭಾವವು ‘ಜಾಗತಿಕ ಮಟ್ಟದಿಂದ ತಳಮಟ್ಟದವರೆಗೆ ಇದ್ದಾಗ ಮಾತ್ರ ಗಮನಾರ್ಹ ಸಾಧನೆಗಳಾಗಿ ಬದಲಾಗಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top