ನವದೆಹಲಿ: ಪಾಕಿಸ್ಥಾನ ಆಕ್ರಮಿತ ಬಲೂಚಿಸ್ತಾನದ ಕೊಹ್ಲು ಜಿಲ್ಲೆಯ ಕಹಾನ್ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯ ವೇಳೆ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಪಾಕಿಸ್ಥಾನಿ ಸೇನೆಯ ಕ್ಯಾಪ್ಟನ್ ಸೇರಿದಂತೆ ಐವರು ಯೋಧರು ಸಾವನ್ನಪ್ಪಿದ್ದಾರೆ.
ಬಲೂಚ್ ಹೋರಾಟಗಾರರು ಈ ಯೋಧರ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ISPR) ಪತ್ರಿಕಾ ಪ್ರಕಟಣೆಯ ಪ್ರಕಾರ, ಕಾರ್ಯಾಚರಣೆ ನಡೆಯುತ್ತಿರುವಾಗ 1 ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದೆ.
“ಕ್ಯಾಪ್ಟನ್ ಫಹಾದ್ ಮತ್ತು ಇತರ ನಾಲ್ವರು ವೀರ ಪುತ್ರರಾದ ಲ್ಯಾನ್ಸ್ ನಾಯಕ್ ಇಮ್ತಿಯಾಜ್, ಸಿಪಾಯಿ ಅಸ್ಗರ್, ಸಿಪಾಯಿ, ಮೆಹ್ರಾನ್ ಮತ್ತು ಸಿಪಾಯಿ ಶಾಮೂನ್ ಅವರು ಹುತಾತ್ಮತೆಯನ್ನು ಸ್ವೀಕರಿಸಿದರು. ಬಾಹ್ಯ ಬೆದರಿಕೆಯ ವಿರುದ್ಧ ತಾಯ್ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂದು ಪಾಕ್ ಸೇನಾ ಪ್ರಕಟನೆ ತಿಳಿಸಿದೆ ಎಂದು ವರದಿಗಳಾಗಿಎ.
ಪಾಕಿಸ್ತಾನದಿಂದ ಬಲೂಚಿಸ್ತಾನಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯನ್ನು ಹೊಂದಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
Viral Video: Balochistan rebels, in a recent attack, killed 5 Pak Army soldiers. An improvised explosive device (IED) exploded near a 'leading party' when the operation was underway. #Balochistan #balochistanliberationarmy pic.twitter.com/etEM6vjCKl
— Aman Dwivedi (@amandwivedi48) January 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.