News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಆಪರೇಷನ್ ಆಲ್ ಔಟ್ʼ: 2022 ರಲ್ಲಿ ಕಾಶ್ಮೀರದಲ್ಲಿ 172 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು  ‘ಆಪರೇಷನ್ ಆಲ್ ಔಟ್ ಅನ್ನು ಮುಂದುವರೆಸಿದ್ದು, 2022 ರಲ್ಲಿ ಕಾಶ್ಮೀರದಲ್ಲಿ 42 ವಿದೇಶಿಯರು ಸೇರಿದಂತೆ 172 ಭಯೋತ್ಪಾದಕರನ್ನು ಹತ್ಯೆ ಮಾಡಿವೆ.

ಕಾಶ್ಮೀರ ಎಡಿಜಿಪಿ  ವಿಜಯ್ ಕುಮಾರ್ (ಐಪಿಎಸ್) ಅವರ ಮಾಹಿತಿಯನ್ನು ಉಲ್ಲೇಖಿಸಿ ಪೊಲೀಸರು ಶನಿವಾರ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಭದ್ರತಾ ಪಡೆಗಳು ಕಾಶ್ಮೀರದಲ್ಲಿ 93 ಯಶಸ್ವಿ ಎನ್‌ಕೌಂಟರ್‌ಗಳನ್ನು ನಡೆಸಿ 172 ಉಗ್ರರನ್ನು ಕೊಂದಿದ್ದಾರೆ. ಎಂದು ಮಾಹಿತಿ ನೀಡಿದೆ.

172 ಭಯೋತ್ಪಾದಕರ ಪೈಕಿ 108 ಮಂದಿ ಲಷ್ಕರ್-ಎ-ತೊಯ್ಬಾ ಮತ್ತು ಅದರ ಅಂಗ ಸಂಘಟನೆ ಟಿಆರ್‌ಎಫ್‌ಗೆ ಸೇರಿದವರು. ಈ ಸಂಘಟನೆ ಭಾರೀ ಹಾನಿಯನ್ನು ಅನುಭವಿಸಿದೆ. ಈ ಎರಡೂ ಭಯೋತ್ಪಾದಕ ಸಂಘಟನೆಗಳು 2022 ರಲ್ಲಿ ಕಣಿವೆಯಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಹತ್ಯೆಗಳನ್ನು ನಡೆಸಿ ಭದ್ರತಾ ಪಡೆಗಳಿಗೆ ತೀವ್ರ ಸವಾಲನ್ನು ಒಡ್ಡಿವೆ ಎಂದಿದೆ.

“2022 ರಲ್ಲಿ, ಕಾಶ್ಮೀರದಲ್ಲಿ ಒಟ್ಟು 93 ಯಶಸ್ವಿ ಎನ್‌ಕೌಂಟರ್‌ಗಳು ನಡೆದಿವೆ, ಇದರಲ್ಲಿ 42 ವಿದೇಶಿ ಭಯೋತ್ಪಾದಕರು ಸೇರಿದಂತೆ 172 ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಗರಿಷ್ಠ ಭಯೋತ್ಪಾದಕರು ಎಲ್‌ಇಟಿ/ಟಿಆರ್‌ಎಫ್ (108) ಸಂಘಟನೆಗೆ ಸೇರಿದವರು. ನಂತರ ಜೆಎಂ (35), ಎಚ್‌ಎಂ (22), ಅಲ್-ಬದ್ರ್ (4) ಮತ್ತು AGuH (3) ಸೇರಿದ ಉಗ್ರರು” ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top