News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೂಡಿಕೆ ಆಕರ್ಷಿಸಲು ರಾಷ್ಟ್ರವ್ಯಾಪಿ ರೋಡ್‌ ಶೋ ನಡೆಸಲಿದೆ ಯುಪಿ

ಲಕ್ನೋ: ಈಗಾಗಲೇ 16 ರಾಷ್ಟ್ರಗಳಿಂದ 7.12 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಿರುವ ಉತ್ತರಪ್ರದೇಶ, ಇದೀಗ ದೇಶೀಯ ಹೂಡಿಕೆದಾರರನ್ನು ಆಕರ್ಷಿಸಲು ದೇಶದ ಏಳು ಪ್ರಮುಖ ನಗರಗಳಲ್ಲಿ ರೋಡ್‌ಶೋಗಳನ್ನು ನಡೆಸಲು ಸಜ್ಜಾಗಿದೆ. ಉತ್ತರ ಪ್ರದೇಶದ ಮಂತ್ರಿಗಳ ಗುಂಪು ಈ ರೋಡ್‌ ಶೋ ನಡೆಸಲಿದೆ ಎಂದು ವರದಿಗಳು ತಿಳಿಸಿವೆ.

ಜನವರಿ 5-23 ರಿಂದ ನಡೆಯಲಿರುವ ರೋಡ್‌ಶೋಗಳು ಫೆಬ್ರವರಿಯಲ್ಲಿ ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ (ಜಿಐಎಸ್) ಪೂರ್ವಭಾವಿಯಾಗಿ ಆಯೋಜನೆಗೊಳ್ಳುತ್ತಿವೆ

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈನಲ್ಲಿ ಪ್ರಮುಖ ಕೈಗಾರಿಕಾ ಸಂಸ್ಥೆಗಳನ್ನು ಖುದ್ದಾಗಿ ಭೇಟಿ ಮಾಡುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಅವರನ್ನು ಆಹ್ವಾನಿಸುತ್ತಾರೆ. ಇತರ ಆರು ನಗರಗಳಿಗೆ ಪ್ರತ್ಯೇಕ ತಂಡಗಳನ್ನು ಸಿದ್ಧಪಡಿಸಲಾಗಿದೆ ಎಂದು ಯುಪಿ ಸರ್ಕಾರದ ಹೇಳಿಕೆ ತಿಳಿಸಿದೆ.

ದೇಶೀಯ ರೋಡ್‌ಶೋಗಳಿಗಾಗಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಹೊಸ ತಂಡವನ್ನು ರಚಿಸಲಾಗಿದೆ.

ಜನವರಿ 5 ರಂದು ಮುಖ್ಯಮಂತ್ರಿ ಮುಂಬೈ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಟಾಟಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ, ಗೋದ್ರೇಜ್, ಆದಿತ್ಯ ಬಿರ್ಲಾ ಗ್ರೂಪ್, ಬಾಂಬೆ ಡೈಯಿಂಗ್, ಬ್ರಿಟಾನಿಯಾ, ಜೆಎಸ್‌ಡಬ್ಲ್ಯು ಗ್ರೂಪ್ ಮತ್ತು ಏಷ್ಯನ್ ಪೇಂಟ್ಸ್ ಗ್ರೂಪ್‌ನ ಪ್ರತಿನಿಧಿಗಳನ್ನು ಭೇಟಿ ಮಾಡುವುದರ ಜೊತೆಗೆ, ಆದಿತ್ಯನಾಥ್ ಅವರು ಮುಂಬೈನಲ್ಲಿ ಬ್ಯಾಂಕಿಂಗ್ ಮತ್ತು ಚಲನಚಿತ್ರೋದ್ಯಮದ ಜನರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಅದಾನಿ ಗ್ರೂಪ್, ಹಿಟಾಚಿ, ಹಿರಾನಂದಾನಿ ಗ್ರೂಪ್, ನೆಸ್ಲೆ, ಕೋಕಾ-ಕೋಲಾ, ಮಾರುತಿ ಸುಜುಕಿ, ಅಶೋಕ ಲೇಲ್ಯಾಂಡ್, ಗೋಯೆಂಕಾ ಗ್ರೂಪ್, ಓಸ್ವಾಲ್ ಇಂಡಸ್ಟ್ರೀಸ್ ಇತ್ಯಾದಿಗಳೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಚೆನ್ನೈನಲ್ಲಿ ಜನವರಿ 9, ನವದೆಹಲಿಯಲ್ಲಿ ಜನವರಿ 13, ಕೋಲ್ಕತ್ತಾದಲ್ಲಿ ಜನವರಿ 16, ಹೈದರಾಬಾದ್‌ನಲ್ಲಿ ಜನವರಿ 18, ಅಹಮದಾಬಾದಿನಲ್ಲಿ ಜನವರಿ 20 ಮತ್ತು ಬೆಂಗಳೂರಿನಲ್ಲಿ ಜನವರಿ 23ರಂದು ರೋಡ್‌ಶೋಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top