News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2019ಕ್ಕೆ ಹೋಲಿಸಿದರೆ 2021ರಲ್ಲಿ 8.1% ರಷ್ಟು ಕಡಿಮೆಯಾದ ರಸ್ತೆ ಅಪಘಾತಗಳು

ನವದೆಹಲಿ: 2019 ಕ್ಕೆ ಹೋಲಿಸಿದರೆ 2021 ರಲ್ಲಿ ದೇಶದಲ್ಲಿ ರಸ್ತೆ ಅಪಘಾತಗಳು ಶೇಕಡಾ 8.1 ರಷ್ಟು ಕಡಿಮೆಯಾಗಿದೆ. ರಸ್ತೆ ಅಪಘಾತಗಳಿಂದ ಉಂಟಾಗುವ ಗಾಯಗಳು ಶೇಕಡಾ 14.8 ರಷ್ಟು ಕಡಿಮೆಯಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಆದರೆ, 2019 ಗೆ ಹೋಲಿಸಿದರೆ 2021 ರಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸಿಧ ಸಾವಿನ ಸಂಖ್ಯೆಯು ಶೇಕಡಾ 1.9 ರಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ. ಹಿಂದಿನ ವರ್ಷ 2020 ರಲ್ಲಿ, ಕೋವಿಡ್-19 ನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡಾನ್‌ ವಿಧಿಸಲಾಗಿದ್ದ ಪರಿಣಾಮ ರಸ್ತೆ ಅಪಘಾತಗಳು, ಸಾವುಗಳು ಮತ್ತು ಗಾಯದ ಘಟನೆಗಳಲ್ಲಿ ಕಡಿಮೆಯಾಗಿತ್ತು.

ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುನೋವುಗಳನ್ನು ಕಡಿಮೆ ಮಾಡಲು ಭಾರತ ಬದ್ಧವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶಿಕ್ಷಣ, ಎಂಜಿನಿಯರಿಂಗ್, ಜಾರಿ ಮತ್ತು ತುರ್ತು ಆರೈಕೆಯ ಆಧಾರದ ಮೇಲೆ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ಬಹು-ಹಂತದ ಕಾರ್ಯತಂತ್ರವನ್ನು ರೂಪಿಸಿದೆ.

ರಸ್ತೆ ಸುರಕ್ಷತೆಯ ಅಡ್ವೊಕಸಿ ನಿರ್ವಹಣೆಗಾಗಿ ಹಣಕಾಸಿನ ನೆರವು ಮತ್ತು ರಸ್ತೆ ಸುರಕ್ಷತೆಯ ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರಶಸ್ತಿಗಳನ್ನು ನೀಡುವ ಯೋಜನೆಯನ್ನು ಇದು ಜಾರಿಗೆ ತಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top