News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಲ ಹಗರಣ: ICICI ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್‌ ಮತ್ತು ಪತಿ ಬಂಧನ

ನವದೆಹಲಿ: ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ವಿಡಿಯೋಕಾನ್ ಗ್ರೂಪ್‌ ಸಾಲ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನಕ್ಕೊಳಪಡಿಸಿದೆ.

ಐಸಿಐಸಿಐ ಬ್ಯಾಂಕ್‌ನ ಮುಖ್ಯಸ್ಥರಾಗಿದ್ದಾಗ ವಿಡಿಯೋಕಾನ್ ಗ್ರೂಪ್‌ಗೆ ಒದಗಿಸಿದ ರೂ 3,000 ಕೋಟಿಗೂ ಅಧಿಕ ಸಾಲದಲ್ಲಿ ಅವ್ಯವಹಾರ ನಡೆದ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸುತ್ತಿದೆ. ಈ ಪ್ರಕರಣದಲ್ಲಿ ಕೊಚ್ಚರ್‌ ದಂಪತಿಗಳನ್ನು ಬಂಧಿಸಲಾಗಿದೆ.

ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ತೈಲ ಮತ್ತು ಅನಿಲ ಪರಿಶೋಧನಾ ಕಂಪನಿಯಾದ ವಿಡಿಯೋಕಾನ್ ಗ್ರೂಪ್‌ ಪರ ಒಲವು ತೋರಿ ಸಾಲ ಮಂಜೂರು ಮಾಡಿದ್ದಾರೆ ಎಂಬ ಆರೋಪದ ಕೇಳಿ ಬಂದ ಬಳಿಕ 59 ವರ್ಷದ ಚಂದಾ ಕೊಚ್ಚರ್ ಅವರು ಅಕ್ಟೋಬರ್ 2018 ರಲ್ಲಿ ಐಸಿಐಸಿಐ ಬ್ಯಾಂಕ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನು ತ್ಯಜಿಸಿದ್ದರು.

ಅವರು ಬ್ಯಾಂಕಿನ ನೀತಿ ಸಂಹಿತೆ ಮತ್ತು ಆಂತರಿಕ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.

ಐಸಿಐಸಿಐ ಬ್ಯಾಂಕ್‌ಗೆ ಅನುತ್ಪಾದಕ ಆಸ್ತಿಯಾಗಿರುವ ವಿಡಿಯೋಕಾನ್ ಗ್ರೂಪ್‌ಗೆ 2012 ರಲ್ಲಿ ರೂ 3,250 ಕೋಟಿ ಸಾಲ ನೀಡುವಲ್ಲಿ ಅಕ್ರಮ ಎಸಗಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಮತ್ತು ಅವರ ಕುಟುಂಬ ಸದಸ್ಯರು ಈ ವ್ಯವಹಾರದಿಂದ ಲಾಭ ಪಡೆದಿದ್ದಾರೆ ಎಂಬ ಆರೋಪವಿದೆ.

ಕೊಚ್ಚರ್ ಸದಸ್ಯರಾಗಿದ್ದ ಸಮಿತಿಯು ಸಾಲವನ್ನು ತೆರವುಗೊಳಿಸಿದೆ ಎಂದು ಸಿಬಿಐ ಆರೋಪಿಸಿದೆ. ಆಕೆ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಿಡಿಯೋಕಾನ್‌ಗೆ ರೂ 300 ಕೋಟಿ ಮಂಜೂರು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top