News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಲಶಕ್ತಿ ಮಿಷನ್‌ ಅಡಿ 55% ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಪೂರೈಕೆ

ನವದೆಹಲಿ: 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವ ಗುರಿಯತ್ತ ಸರ್ಕಾರ ದಾಪುಗಾಲು ಇಡುತ್ತಿದೆ. ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿನ ಜಲ ಜೀವನ್ ಮಿಷನ್ (ಜೆಜೆಎಂ) ಅಡಿ 55% ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕಗಳನ್ನು ಒದಗಿಸಲಾದೆ.

ಜಲ ಜೀವನ್ ಮಿಷನ್ ಅನ್ನು 15 ಆಗಸ್ಟ್ 2019 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪು  ಕೋಟೆಯಿಂದ ಘೋಷಿಸಿದರು. ಘೋಷಣೆಯ ಸಮಯದಲ್ಲಿ, ಕೇವಲ 3.23 ಕೋಟಿ (ಶೇ 17ರಷ್ಟು) ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು ಎಂದು ವರದಿಯಾಗಿದೆ.

ಆದರೆ ಜಲ ಜೀವನ್ ಮಿಷನ್ ಆರಂಭದ ಬಳಿಕ ಸುಮಾರು 7.48 ಕೋಟಿ (ಶೇ. 38) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಹೀಗಾಗಿ, 13 ಡಿಸೆಂಬರ್ 2022 ರಂತೆ, ದೇಶದ 19.36 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ 10.71 ಕೋಟಿ (ಶೇ. 55) ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಲ್ಲಿ ಟ್ಯಾಪ್ ನೀರಿನ ಪೂರೈಕೆಯನ್ನು ಹೊಂದಿವೆ ಎಂದು ವರದಿಗಳು ತಿಳಿಸಿವೆ.

ಜಲಶಕ್ತಿ ಸಚಿವಾಲಯದ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಗುಜರಾತ್, ಹರಿಯಾಣ, ಪುದುಚೇರಿ ಮತ್ತು ತೆಲಂಗಾಣವು ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಟ್ಯಾಪ್ ನೀರಿನ ಸಂಪರ್ಕದ 100 ಪ್ರತಿಶತ ವ್ಯಾಪ್ತಿಯನ್ನು ಸಾಧಿಸಿದೆ. ಬಿಹಾರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳು ಶೇಕಡಾ 95 ರಷ್ಟು ವ್ಯಾಪ್ತಿಯನ್ನು ಸಾಧಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top