News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ʼಸಿಂಧುಜಾʼ ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್

ನವದೆಹಲಿ: ಐಐಟಿ ಮದ್ರಾಸ್ ಸಂಶೋಧಕರು ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ‘ಓಷನ್ ವೇವ್ ಎನರ್ಜಿ ಪರಿವರ್ತಕ’ವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಪ್ರಯೋಗಗಳನ್ನು ನವೆಂಬರ್ 2022 ರ ಎರಡನೇ ವಾರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ತಮಿಳುನಾಡಿನ ಟುಟಿಕೋರಿನ್ ಕರಾವಳಿಯಿಂದ ಸುಮಾರು 6 ಕಿಮೀ ದೂರದಲ್ಲಿ 20 ಮೀಟರ್ ಆಳವಿರುವ ಸ್ಥಳದಲ್ಲಿ ಸಾಧನವನ್ನು ನಿಯೋಜಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಸಮುದ್ರದ ಅಲೆಗಳಿಂದ 1MW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಈ ಸಾಧನ ಹೊಂದಿದೆ.

ಈ ಯೋಜನೆಯ ಯಶಸ್ಸು  ಸುಸ್ಥಿರ ಅಭಿವೃದ್ಧಿ ಗುರಿಗಳಂತಹ ಹಲವಾರು ಉದ್ದೇಶಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಆಳವಾದ ನೀರಿನ ಕಾರ್ಯಾಚರಣೆಗಳು, ಶುದ್ಧ ಇಂಧನ ಮತ್ತು ನೀಲಿ ಆರ್ಥಿಕತೆಯನ್ನು ಸಾಧಿಸುವ, ನವೀಕರಿಸಬಹುದಾದ ಶಕ್ತಿಯ ಮೂಲಕ 2030 ರ ವೇಳೆಗೆ 500 GW ವಿದ್ಯುತ್ ಉತ್ಪಾದಿಸುವ ತನ್ನ ಹವಾಮಾನ ಬದಲಾವಣೆ-ಸಂಬಂಧಿತ ಗುರಿಗಳನ್ನು ಪೂರೈಸಲು ಇದು ಭಾರತಕ್ಕೆ ಸಹಾಯ ಮಾಡಲಿದೆ.

ಉತ್ಪನ್ನಕ್ಕೆ ‘ಸಿಂಧೂಜಾ-I’ ಎಂದು ಹೆಸರಿಸಲಾಗಿದೆ, ಇದರರ್ಥ ‘ಸಾಗರ ಜನಿತʼ ಎಂಬುದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top