’ರೀ ಥಿಂಕ್’ ಎಂಬುದು ಸೈಬರ್ ಮೂಲಕ ಬೆದರಿಕೆಗಳನ್ನು (Cyber Bullying) ಪತ್ತೆ ಹಚ್ಚುವ ಹೊಸ ತಂತ್ರಜ್ಞಾನ. ಇದು ಫೇಸ್ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ, ಇ-ಮೇಲ್ಗಳಲ್ಲಿ ಬೆದರಿಕೆ, ದ್ವೇಷ ಹುಟ್ಟಿಸುವ ಪದಗಳನ್ನು ಬಳಸುವ ಮೊದಲು ಒಂದು ಬಾರಿ ಯೋಚಿಸುವಂತೆ ಮಾಡುತ್ತದೆ. 15 ವರ್ಷದ ಬಾಲಕಿಯೊಬ್ಬಳು ತನ್ನ ಪ್ರೌಢ ಚಿಂತನೆಯಿಂದ ಈ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ವಿಶೇಷ.
ತ್ರಿಶಾ ಪ್ರಭು ತನ್ನ 13ನೇ ವಯಸ್ಸಿನಲ್ಲಿ, 11 ವರ್ಷದ ಬಾಲಕಿಯೊಬ್ಬಳು ಸೈಬರ್ ಬೆದರಿಕೆಯಿಂದಾಗಿ ನೀರಿನ ಟ್ಯಾಂಕ್ಗೆ ಹಾರಿ ಆತ್ಮಹತ್ಯೆ ಮಾಡಿದ್ದನ್ನು ಕೇಳಿದ್ದಳು. ಇದು ಆಕೆಯ ಮೇಲೆ ಗಂಭೀರ ಪ್ರಭಾವ ಬೀರಿತು. ಅಲ್ಲದೇ ತಾನೂ ಕೂಡ ಈ ಸಮಸ್ಯೆಯನ್ನು ಎದುರಿಸಿದ್ದಳು. ಹೀಗಾಗಿ ಭಾರತೀಯ ಮೂಲದ ಅಮೇರಿಕದ ನೇಪರ್ವಿಲ್ಲಿಯ ತ್ರಿಶಾ, ಜಾಲತಾಣಗಳ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದಳು.
ಈ ಬಗ್ಗೆ ಸಂಶೋಧನೆ ನಡೆಸಿದ ತ್ರಿಶಾ, ಶೇ. 50ರಷ್ಟು ಹದಿ-ಹರೆಯದವರು ಆನ್ಲೈನ್ಗಳಲ್ಲಿ ನಿಂದನೆಗೆ ಒಳಗಾಗುತ್ತಾರೆ. ಸಂತ್ರಸ್ತರು ಖಿನ್ನತೆಗೆ ಒಳಗಾಗಿ, ಸ್ವಾಭಿಮಾನ ಕಳೆದುಕೊಳ್ಳುತ್ತಾರೆ. ಆತಂಕ ಪಡುತ್ತಾರೆ. ಇನ್ನು ಶೇ.38ರಷ್ಟು ಸಂತ್ರಸ್ತರು ಆತ್ಮಹತ್ಯೆಗೆ ಒಳಗಾಗುತ್ತಾರೆ. ಆಕೆ ಓದಿದ ಒಂದು ಲೇಖನದ ಮೂಲಕ ಆಕೆಗೆ ಈ ಸಮಸ್ಯೆ ಪರಿಹರಿಸುವ ವಿಚಾರ ಹೊಳೆಯಿತು.
ಜನರು ಇಂತಹ ಸಂದೇಶಗಳನ್ನು ಕಳಿಸುವ ಮುನ್ನ ಒಂದು ಕ್ಷಣ ಯೋಚಿಸಿ, ವಿಮರ್ಶೆ ನಡೆಸುವ ಎಚ್ಚರಿಕೆ ನೀಡುವಂಥ ಕ್ರಾಂತಿಕಾರಿ ಯೋಚನೆಯಿಂದ ’ರೀ ಥಿಂಕ್’ ಎಂಬ ಹೊಸ ಸಾಫ್ಟ್ವೇರ್ನ ಆವಿಷ್ಕರಿಸಿದಳು. ಆಕೆಯ ರಚಿಸಿದ ‘ರೀ ಥಿಂಕ್’ ಆ್ಯಪ್ನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
ಸುಮಾರು 1,500 ಮೊಬೈಲ್ ಬಳಕೆದಾರರಲ್ಲಿ ಇದನ್ನು ಪರೀಕ್ಷಿಸಲಾಗಿದ್ದು, ಹದಿ ಹರೆಯದವರಲ್ಲಿ ಶೇ.93ರಷ್ಟು ಪ್ರಭಾವ ಬೀರಿದೆ. ಶಾಲಾ ಕಾರ್ಯಗಳ ಜೊತೆಗೆ ಆಕೆ ಸ್ವತಃ ತಂತ್ರಜ್ಞಾನವನ್ನು ಕಲಿತು ಈ ಆ್ಯಪ್ನ್ನು ರಚಿಸಿದ್ದಾಳೆ. ಈಗಾಗಲೇ 100 ಮಂದಿ ಈ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಐ-ಸ್ಟೋರ್ನಲ್ಲೂ ಈ ಆ್ಯಪ್ ಲಭ್ಯವಾಗುವಂತೆ ಮಾಡಲು ತ್ರಿಶಾ ಬಯಸಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.