ನವದೆಹಲಿ: ಫೇಶಿಯಲ್ ರೆಕಾಗ್ನಿಷನ್ ತಂತ್ರಜ್ಞಾನವನ್ನು ಆಧರಿಸಿದ ಸೇವೆಯನ್ನು ಇಂದಿನಿಂದ ಬೆಂಗಳೂರು, ದೆಹಲಿ ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಮಾರ್ಚ್ 2023 ರ ವೇಳೆಗೆ ಇನ್ನೂ ನಾಲ್ಕು ನಗರ ಹೈದರಾಬಾದ್, ಕೋಲ್ಕತ್ತಾ, ಪುಣೆ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳಲ್ಲಿ ಈ ಸೇವೆ ಆರಂಭವಾಗಲಿದೆ.
ದೆಹಲಿಯ ಇಂದಿರಾಗಾಂಧಿ ಇಂಟರ್ನ್ಯಾಶನಲ್ (IGI), ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಪೇಪರ್ಲೆಸ್ ಏರ್ಪೋರ್ಟ್ ಪ್ರವೇಶ ಸೌಲಭ್ಯವು ಈಗ ಕಾರ್ಯನಿರ್ವಹಿಸುತ್ತಿದೆ. ಇಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇದನ್ನು ಪ್ರಾರಂಭಿಸಿದ್ದಾರೆ.
ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್ಆರ್ಟಿ) ಆಧಾರದ ಮೇಲೆ, ಡಿಜಿ ಯಾತ್ರಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಡೆರಹಿತ ಮತ್ತು ಸಂಪರ್ಕರಹಿತವಾಗಿ ತಪಾಸಣೆಯ ಗುರಿಯನ್ನು ಹೊಂದಿದೆ. ಇದರೊಂದಿಗೆ, ವಿಮಾನ ನಿಲ್ದಾಣದ ವಿವಿಧ ಚೆಕ್ಪೋಸ್ಟ್ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.
ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಆಪ್ ಸ್ಟೋರ್ನಿಂದ ಡಿಜಿ ಯಾತ್ರಾ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ, ಪ್ರಯಾಣಿಕರು ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಗುರುತಿನ ದಾಖಲೆಯ ವಿವರಗಳನ್ನು (ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇತ್ಯಾದಿ) ಹಂಚಿಕೊಳ್ಳುವ ಮೂಲಕ ಈ ಐಡಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ನಮೂದಿಸಿದ ನಂತರ, ಡಿಜಿ ಯಾತ್ರಾ ಐಡಿಯನ್ನು ರಚಿಸಲಾಗುತ್ತದೆ. ಟಿಕೆಟ್ ಕಾಯ್ದಿರಿಸುವಾಗ ಅದನ್ನು ಹಂಚಿಕೊಳ್ಳಬೇಕು. ಏರ್ಲೈನ್ ಕಂಪನಿಗಳು, ಈ ಐಡಿ ಮತ್ತು ಪ್ರಯಾಣಿಕರ ಡೇಟಾವನ್ನು ಡಿಪಾರ್ಚರ್ ಏರ್ಪೋರ್ಟ್ನೊಂದಿಗೆ ಹಂಚಿಕೊಳ್ಳುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.