ನವದೆಹಲಿ: ಭಾರತದ ಗಡಿ ಭದ್ರತಾ ಪಡೆ (BSF) ಇಂದು ತನ್ನ 58 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಡಿಸೆಂಬರ್ 1, 1965 ರಂದು ಬಿಎಸ್ಎಫ್ನ ಪಂಜಾಬ್ ಫ್ರಾಂಟಿಯರ್ನ ಮೊದಲ ಸೆಕ್ಟರ್ ಅನ್ನು ಜಲಂಧರ್ನಲ್ಲಿ ತನ್ನ ಪ್ರಧಾನ ಕಛೇರಿಯೊಂದಿಗೆ ಸ್ಥಾಪಿಸಲಾಯಿತು.
“ಬಿಎಸ್ಎಫ್ನ ಎಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಂಸ್ಥಾಪನಾ ದಿನದ ಶುಭಾಶಯಗಳು. ಬಿಎಸ್ಎಫ್ ಭಾರತವನ್ನು ರಕ್ಷಿಸುವ ಮತ್ತು ನಮ್ಮ ರಾಷ್ಟ್ರಕ್ಕೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸುವ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಶಕ್ತಿಯಾಗಿದೆ. ನೈಸರ್ಗಿಕ ವಿಕೋಪಗಳಂತಹ ಸವಾಲಿನ ಸಂದರ್ಭಗಳಲ್ಲಿ ಬಿಎಸ್ಎಫ್ನ ಉದಾತ್ತ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ” ಎಂದಿದ್ದಾರೆ.
1965 ರಲ್ಲಿ ರಚನೆಯಾದ ಬಿಎಸ್ಎಫ್ ಮುಖ್ಯವಾಗು ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಭಾರತದ ಗಡಿಗಳನ್ನು ಭದ್ರಪಡಿಸುವಲ್ಲಿ ನಿರತವಾಗಿದೆ. ಇದು ಭಾರತ-ಬಾಂಗ್ಲಾದೇಶ ಮತ್ತು ಭಾರತ-ಪಾಕಿಸ್ತಾನ ಗಡಿಗಳಲ್ಲಿ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಮೀಸಲಾಗಿರುವ ಭಾರತೀಯ ಸಶಸ್ತ್ರ ಸಿಬ್ಬಂದಿಯನ್ನು ಒಳಗೊಂಡ ಮಹಾನ್ ದೇಶಭಕ್ತ ಪಡೆಯಾಗಿದೆ.
Raising Day greetings to all @BSF_India personnel and their families. This is a force with an outstanding track record of protecting India and serving our nation with utmost diligence. I also appreciate the noble work of BSF during challenging situations like natural disasters. pic.twitter.com/qdFCLrfZGl
— Narendra Modi (@narendramodi) December 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.