ಸಬ್ರೂಮ್: ಭಾರತದ ಮೊದಲ ಅಂತಾರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾನಿಲಯಕ್ಕೆ ಮಂಗಳವಾರ ತ್ರಿಪುರಾದ ಸಬ್ರೂಮ್ನಲ್ಲಿ ಶಂಕುಸ್ಥಾಪನೆ ಮಾಡಲಾಯಿತು.
ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಸೇರಿದಂತೆ ಏಳು ರಾಷ್ಟ್ರಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ದಕ್ಷಿಣ ಕೊರಿಯಾದ ವಿಶ್ವ ಬೌದ್ಧ ಪೋಪ್ ಸಂಘಟನೆಯ ಮುಖ್ಯ ಸನ್ಯಾಸಿ ಶಾಕ್ಯಾ ಗಸನ್ ಅವರು ಶಂಕುಸ್ಥಾಪನೆ ಮಾಡಿದರು.
ಆರೋಗ್ಯ ಸಮಸ್ಯೆಗಳಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ದಲೈ ಲಾಮಾ ಅವರು ಸಂದೇಶ ರವಾನಿಸಿ, ವಿಶ್ವವಿದ್ಯಾನಿಲಯವು ತ್ರಿಪುರಾದಲ್ಲಿ ಮಾತ್ರವಲ್ಲದೆ ಈಶಾನ್ಯ ಮತ್ತು ಅದರಾಚೆಗೂ ಭಾರತದ ದೀರ್ಘಕಾಲದ ಸಂಪ್ರದಾಯಗಳಾ ಸಹಾನುಭೂತಿ ಮತ್ತು ಅಹಿಂಸೆಯನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಆಶಿಸಿದ್ದಾರೆ.
ಬೌದ್ಧ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪೋಷಿಸಿದ ಭಾರತಕ್ಕೆ ಜಗತ್ತು ಧನ್ಯವಾದ ಹೇಳಬೇಕು ಎಂದು ಗಸನ್ ತಮ್ಮ ಭಾಷಣದಲ್ಲಿ ಹೇಳಿದರು.
“ಕೊರಿಯಾ ಯುದ್ಧದ ಸಮಯದಲ್ಲಿ ಭಾರತವು ನಮ್ಮ ಸೈನಿಕರಿಗೆ ಔಷಧಿಗಳನ್ನು ಕಳುಹಿಸುವ ಮೂಲಕ ದಕ್ಷಿಣ ಕೊರಿಯಾದ ಬೆನ್ನೆಲುಬಾಗಿ ನಿಂತಿತು, ನಾವು ಆ ಋಣವನ್ನು ತೀರಿಸಬೇಕಿದೆ” ಎಂದು ಅವರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯವನ್ನು ಬಹುಜನ ಹಿತಾಯ ಶಿಕ್ಷಣ ಟ್ರಸ್ಟ್ (BHET) ಸ್ಥಾಪಿಸುತ್ತಿದೆ.
ಪ್ರಸ್ತಾವಿತ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅಧ್ಯಯನ ಮಾಡಲು ಮತ್ತು ಸಂಶೋಧನೆ ಮಾಡಲು 31 ದೇಶಗಳ ವಿದ್ಯಾರ್ಥಿಗಳು ಅವಕಾಶವನ್ನು ಪಡೆಯುತ್ತಾರೆ. ಅಲ್ಲದೆ, ಕ್ಯಾಂಪಸ್ನಲ್ಲಿ ವೈದ್ಯಕೀಯ, ತಾಂತ್ರಿಕ ಮತ್ತು ಸಾಮಾನ್ಯ ಪದವಿ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಧಮ್ಮ ದೀಪ ಅಂತರಾಷ್ಟ್ರೀಯ ಬೌದ್ಧ ವಿಶ್ವವಿದ್ಯಾಲಯದ ಮಸೂದೆ 2022 ಅನ್ನು ತ್ರಿಪುರಾ ರಾಜ್ಯ ವಿಧಾನಸಭೆಯು ಸೆಪ್ಟೆಂಬರ್ನಲ್ಲಿ ಅಂಗೀಕರಿಸಿತು.
ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಸರ್ಕಾರ 25.28 ಎಕರೆ ಭೂಮಿಯನ್ನು 75.84 ಲಕ್ಷ ರೂಪಾಯಿಗಳನ್ನು ನೀಡಿದ್ದು, ಟ್ರಸ್ಟ್ ಇದಕ್ಕಾಗಿ 100 ಎಕರೆ ಹೆಚ್ಚಿನ ಭೂಮಿಯನ್ನು ಕೋರಿದೆ.
40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ತ್ರಿಪುರಾದಲ್ಲಿ ಸುಮಾರು 50,000 ಬೌದ್ಧರು ವಾಸಿಸುತ್ತಿದ್ದಾರೆ. ಮೋಗ್, ಉಚೋಯ್ ಮತ್ತು ಚಕ್ಮಾ ಸಮುದಾಯದ ಜನರು ಸಾಂಪ್ರದಾಯಿಕವಾಗಿ ಬೌದ್ಧರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.