ನವದೆಹಲಿ: ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ನವದೆಹಲಿಯಲ್ಲಿ ನಡೆದ ರಷ್ಯಾದ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ರಷ್ಯಾ ಮತ್ತು ಭಾರತ ನಡುವಿನ ಬಲವಾದ ಜನರರಿಂದ ಜನರ ಬಾಂಧವ್ಯಕ್ಕೆ ಕರೆ ನೀಡಿದ್ದಾರೆ.
ಈ ಭಾವನೆಯನ್ನು ಒತ್ತಿಹೇಳಲು ಅವರು ಜನಪ್ರಿಯ ಹಿಂದಿ ಮಾತು- “ದೋಸ್ತಿ ಸೆ ಝ್ಯಾದಾ ಕುಚ್ ಭಿ ನಹೀ ಹೋತಾ” ಅನ್ನು ಉಲ್ಲೇಖಿಸಿದ್ದಾರೆ.
“ಇಂದು ರಾತ್ರಿ ನಾವು ರಷ್ಯಾ ಮತ್ತು ಭಾರತದ ಪರಸ್ಪರ ಸಾಂಸ್ಕೃತಿಕ ಉತ್ಸವಗಳ ಅದ್ಭುತ ಸಂಪ್ರದಾಯವನ್ನು ಪುನರಾರಂಭಿಸುತ್ತಿದ್ದೇವೆ. ಈ ವರ್ಷ ನಾವು ಮೂರು ನೃತ್ಯ ಮತ್ತು ಹಾಡುಗಾರಿಕೆಯನ್ನು ಭಾರತಕ್ಕೆ ತಂದಿದ್ದೇವೆ ಮತ್ತು ಈ ನಿರ್ದಿಷ್ಟ ವರ್ಷದ ಉತ್ಸವವು ಅತ್ಯಂತ ವರ್ಣರಂಜಿತ ಪರಾಕಾಷ್ಠೆಯಾಗಲಿದೆ. 75 ನೇ ವಾರ್ಷಿಕೋತ್ಸವದ ರಷ್ಯಾ-ಭಾರತ ರಾಜತಾಂತ್ರಿಕ ಸಂಬಂಧ ನಮ್ಮ ರಾಷ್ಟ್ರಗಳ ನಡುವಿನ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಬಾಂಧವ್ಯಗಳು, ಐತಿಹಾಸಿಕ ಸ್ನೇಹ, ಪರಸ್ಪರ ಆಸಕ್ತಿ ಮತ್ತು ತಿಳುವಳಿಕೆ ಮತ್ತು ನಂಬಿಕೆಯ ಅತ್ಯಂತ ಎದ್ದುಕಾಣುವ ವಿವರಣೆಯಾಗಿದೆ” ಎಂದು ರಷ್ಯಾದ ರಾಯಭಾರಿ ಹೇಳಿದ್ದಾರೆ.
ಭಾರತ-ರಷ್ಯಾ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಷ್ಯಾದ ಸಂಸ್ಕೃತಿ ಉತ್ಸವವನ್ನು ನವದೆಹಲಿಯಲ್ಲಿ ಆಯೋಜಿಸಲಾಗುತ್ತಿದೆ.
#WATCH | There is a popular saying in India, "Dosti se zyada kuch bhi nahi hota". A very precise characteristic of the trusted & friendly character of Russia-India strategic partnership: Russian Ambassador Denis Alipov at the Russian Culture festival inauguration in Delhi (21.11) pic.twitter.com/KPbPWJReE9
— ANI (@ANI) November 22, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.