ನವದೆಹಲಿ: ಟೀ ಬೋರ್ಡ್ ಡೇಟಾ ಪ್ರಕಾರ, 2022 ರ ಕ್ಯಾಲೆಂಡರ್ ವರ್ಷದ ಮೊದಲ ಎಂಟು ತಿಂಗಳಲ್ಲಿ ಭಾರತದಿಂದ ಚಹಾದ ರಫ್ತು ಶೇಕಡಾ 14.8 ರಷ್ಟು 140.28 ಮಿಲಿಯನ್ ಕಿಲೋಗ್ರಾಂಗಳಿಗೆ ಹೆಚ್ಚಾಗಿದೆ.
2021 ರಲ್ಲಿ ಜನವರಿ-ಆಗಸ್ಟ್ ಅವಧಿಯಲ್ಲಿ ಚಹಾ ಸಾಗಣೆಯು 122.18 ಮಿಲಿಯನ್ ಕಿಲೋಗ್ರಾಂ ಇತ್ತು.
ರಷ್ಯಾ, ಉಕ್ರೇನ್ ಮತ್ತು ಕಝಾಕಿಸ್ತಾನ್ ಸೇರಿದಂತೆ ಸಿಐಎಸ್ (The Commonwealth of Independent States) ದೇಶಗಳು 2022 ರ ಮೊದಲ ಎಂಟು ತಿಂಗಳಲ್ಲಿ 30.56 ಮಿಲಿಯನ್ ಮೌಲ್ಯದ ಚಹಾ ಖರೀದಿ ಮಾಡುವ ಮೂಲಕ ಭಾರತೀಯ ಚಹಾದ ಅತಿದೊಡ್ಡ ಆಮದುದಾರರಾಗಿ ಉಳಿದಿವೆ, 2021ರ ಇದೇ ಅವಧಿಯಲ್ಲಿ ಈ ರಾಷ್ಟ್ರಗಳಿಗೆ 29.13 ಮಿಲಿಯನ್ ಕಿಲೋಗ್ರಾಂ ರವಾನಿಸಲಾಗಿತ್ತು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಕಾರಣದಿಂದಾಗಿ ಗಗನಕ್ಕೇರಿರುವ ಹಡಗು ಮತ್ತು ಕಂಟೈನರ್ ವೆಚ್ಚಗಳ ಕಾರಣದಿಂದಾಗಿ ಚಹಾ ರಫ್ತುಗಳು ಗಣನೀಯವಾಗಿ ಏರಲಿಲ್ಲ ಎಂದು ಉದ್ಯಮದ ಮೂಲಗಳು ತಿಳಿಸಿವೆ.
CIS ದೇಶಗಳ ನಂತರ, ಯುಎಇ 23.84 ಮಿಲಿಯನ್ ಕಿಲೋಗ್ರಾಂ ಚಹಾ ಖರೀದಿಸಿ ಎರಡನೇ ಅತಿ ದೊಡ್ಡ ಆಮದುದಾರನಾಗಿದ್ದು, 2021 ರಲ್ಲಿ ಇದೇ ಅವಧಿಯಲ್ಲಿ 9.27 ಮಿಲಿಯನ್ ಕಿಲೋಗ್ರಾಂ ಖರೀದಿ ಮಾಡಿತ್ತು.
ಇರಾನ್ ಮೇಲೆ ಯುಎಸ್ ವಿಧಿಸಿದ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ, ಪಶ್ಚಿಮ ಏಷ್ಯಾದ ದೇಶಕ್ಕೆ ಚಹಾ ಸಾಗಣೆಯು 2022 ರ ಮೊದಲ ಎಂಟು ತಿಂಗಳಲ್ಲಿ ಹೆಚ್ಚಾಗಲು ವಿಫಲವಾಗಿದೆ.
ಮೌಲ್ಯದ ಪರಿಭಾಷೆಯಲ್ಲಿ, ಭಾರತೀಯ ಚಹಾ ರಫ್ತು 2022ರ ಮೊದಲ ಎಂಟು ತಿಂಗಳಲ್ಲಿ 3,837.28 ಕೋಟಿ ರೂ.ಗಳಷ್ಟಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 3,353.35 ಕೋಟಿ ರೂ ಆಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.