ನವದೆಹಲಿ: ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಯಾನವನ್ನು ಸೋಮವಾರ ಉದ್ಘಾಟಿಸಿದರು. ಈ ವಿಮಾನದ ಹಾರಾಟ ವಾರದ ಎಲ್ಲಾ ಏಳು ದಿನಗಳು ಕಾರ್ಯನಿರ್ವಹಿಸುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇದರ ಫ್ಲೈಟ್ ಅನೌನ್ಸ್ಮೆಂಟ್ ಉತ್ತರ ಕರ್ನಾಟಕ ಭಾಷೆಯಲ್ಲಿ ಇರುವುದು ತುಂಬಾ ವಿಶೇಷವೆನಿಸಿದೆ.
179 ಪ್ರಯಾಣಿಕರಿದ್ದ ಏರ್ಬಸ್ ಎ320 ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಂತಸದಿಂದ ಸ್ವಾಗತಿಸಲಾಯಿತು. ಹುಬ್ಬಳ್ಳಿಯಿಂದ ದೆಹಲಿಗೆ ಹೊರಟ ವಿಮಾನದಲ್ಲಿ ನಿನ್ನೆ 151 ಮಂದಿ ಪ್ರಯಾಣಿಸಿದರು, ಈ ಪ್ರಯಾಣಿಕರಲ್ಲಿ ಪ್ರಹ್ಲಾದ್ ಜೋಶಿ ಕೂಡ ಒಬ್ಬರಾಗಿದ್ದರು.
ವೇಳಾಪಟ್ಟಿಯ ಪ್ರಕಾರ, ವಿಮಾನ ಸಂಖ್ಯೆ 6E 5624 ದೆಹಲಿಯಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 12.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ನಂತರ ವಿಮಾನ ಸಂಖ್ಯೆ 6E 5625 ಹುಬ್ಬಳ್ಳಿಯಿಂದ ಮಧ್ಯಾಹ್ನ 1.15 ಕ್ಕೆ ಹೊರಟು 3.45ಕ್ಕೆ ದೆಹಲಿ ತಲುಪಲಿದೆ.
ವಿಮಾನಯಾನಕ್ಕೆ ಸೋಮವಾರ ಹಸಿರು ನಿಶಾನೆ ತೋರಿದ ಬಳಿಕ ಮಾತಾಡಿದ ಸಂಸದ ಪ್ರಹ್ಲಾದ್ ಜೋಶಿಯವರು, ಈ ವಿಮಾನವು ಧಾರವಾಡ ಜಿಲ್ಲೆಯ ಜನರಿಗಷ್ಟೇ ಸಹಾಯ ಮಾಡುವುದಲ್ಲದೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರದೇಶಗಳ ನಿವಾಸಿಗಳಿಗೂ ವರದಾನವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.