ತಿರುವನಂತಪುರಂ: ಸಿಪಿಎಂ ಮತ್ತು ಜಮಾತ್ ಎ ಇಸ್ಲಾಮಿ ಸಂಘಟನೆ ಬೆಂಬಲಿತ ಮಾಧ್ಯಮಗಳನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಸುದ್ದಿಗೋಷ್ಠಿಯಿಂದ ಹೊರಗಿಟ್ಟಿದ್ದಾರೆ.
ಸಿಪಿಎಂ ನಡೆಸುತ್ತಿರುವ ಕೈರಳಿ ಮತ್ತು ಜಮಾತೆ ಎ ಇಸ್ಲಾಮಿ ಸಂಘಟನೆ ಬೆಂಬಲಿತ ಮೀಡಿಯಾ ವನ್ ಪ್ರತಿನಿಧಿಗಳಿಗೆ ಆರಿಫ್ ಖಾನ್ ಅವರು ತಮ್ಮ ಮಾಧ್ಯಮಗೋಷ್ಠಿಯಿಂದ ಹೊರಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಎರಡು ಮಾಧ್ಯಮಗಳು ತಮ್ಮ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೇರಳ ಸರಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, ಸಂವಿಧಾನಿಕ ಯಂತ್ರವನ್ನು ಪತನಗೊಳಿಸಲು ಸಿಪಿಎಂ ಹವಣಿಸುತ್ತಿದೆ. ಅವರಿಗೆ ಧೈರ್ಯವಿದ್ದರೆ ರಾಜಭವನಕ್ಕೆ ನುಗ್ಗಲಿ ಮತ್ತು ರಸ್ತೆಯಲ್ಲಿ ನನ್ನ ಮೇಲೆ ದಾಳಿ ನಡೆಸಲಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.