ನವದೆಹಲಿ: 2022-23 ರ ರಬಿ ಋತುವಿನ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ 51,875 ಕೋಟಿ ರೂಪಾಯಿಗಳ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಮತ್ತು ಸರ್ಕಾರವು ಈ ವರ್ಷ ಅತಿ ಹೆಚ್ಚು ಸಬ್ಸಿಡಿಯನ್ನು ನೀಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
2022-23ರ ಬಜೆಟ್ನಲ್ಲಿ ರಬಿ ಋತುವಿನ ಆರಂಭಿಕ ಸಬ್ಸಿಡಿ ಡಿಎಪಿಗೆ ರೂ 21,000 ಕೋಟಿ ಮತ್ತು ಯೂರಿಯಾಕ್ಕೆ ರೂ 33,500 ಕೋಟಿ ನೀಡಲಾಗಿದೆ ಆದರೆ ಇದನ್ನು ಕೇಂದ್ರ ಸಂಪುಟ ಡಿಎಪಿಗೆ ರೂ 51,875 ಕೋಟಿ ರೂ ಮತ್ತು ಯೂರಿಯಾಕ್ಕೆ 87,000 ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಅಂತರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಿದ್ದರೂ ರೈತರ ಹೊರೆ ತಗ್ಗಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ” ಎಂದು ಮಾಂಡವೀಯ ಹೇಳಿದ್ದಾರೆ.
“2022-23 ರಲ್ಲಿ ರಬಿ ಋತುವಿನ ಸಬ್ಸಿಡಿ 1,38, 875 ಕೋಟಿ ರೂ. ಮತ್ತು ಈ ವರ್ಷದ ಸಬ್ಸಿಡಿ ಮೊತ್ತವು 2.25 ಲಕ್ಷ ಕೋಟಿಗಳಾಗಿದ್ದು, ಇದು ಒಂದು ವರ್ಷದ ಅತ್ಯಧಿಕ ಮೊತ್ತವಾಗಿದೆ. ಹಿಂದಿನ ಅತಿ ಹೆಚ್ಚು ಸಬ್ಸಿಡಿ 1.62 ಲಕ್ಷ ಕೋಟಿ ಆಗಿತ್ತು” ಎಂದು ಅವರು ಹೇಳಿದ್ದಾರೆ.
ಕೈಗೆಟಕುವ ದರದಲ್ಲಿ ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದ ಸಚಿವರು, ರಸಗೊಬ್ಬರಗಳ ಅಂತರರಾಷ್ಟ್ರೀಯ ಬೆಲೆಗಳು, ಡಿಎಪಿ ಮತ್ತು ಇತರ ಪಿ & ಕೆ ರಸಗೊಬ್ಬರಗಳ ಕಚ್ಚಾ ವಸ್ತುಗಳ ದರ ತೀವ್ರವಾಗಿ ಹೆಚ್ಚಿವೆ ಆದರೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಸಕಾಲಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರನ್ನು ರಕ್ಷಿಸಲು ಸಹಾಯಧನವನ್ನು ಹೆಚ್ಚಿಸುವ ಮೂಲಕ ಸರ್ಕಾರವು ಏರಿಕೆಯನ್ನು ಕಡಿಮೆ ಮಾಡಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.