ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರು ಇಂದು ಬೆಂಗಳೂರಿನ ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಮತ್ತು ಇಲಾಖೆ ಮತ್ತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ಸಂಸ್ಥೆಯು ಸ್ಥಾಪಿಸಿರುವ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು ಉದ್ಘಾಟಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಗೌರವಾರ್ಥ ಸ್ಥಾಪನೆ ಮಾಡಲಾಗಿರುವ ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು ಅವರ ಪುಣ್ಯತಿಥಿಯಾದ ಇಂದು ಉದ್ಘಾಟಿಸಲಾಗಿದೆ.
ಈ ವೇಳೆ ‘ನಮ್ಮ ಮಲ್ಲೇಶ್ವರ’ ಎಂಬ ವೆಬ್ ಸೈಟ್ ಅನ್ನು ಕೂಡ ಸಿಎಂ ಉದ್ಘಾಟಿಸಿದ್ದಾರೆ. ಮಲ್ಲೇಶ್ವರ ಸ್ಕೂಲ್ ಮಾಡೆಲ್ ಚಿಹ್ನೆಯನ್ನು ಸಹ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಇಂದು ಪುನೀತ್ ಪುಣ್ಯ ಸ್ಮರಣೆಯ ದಿನ. ಪುನೀತ್ ಸದಾ ಪ್ರಯೋಗಾತ್ಮಕವಾಗಿದ್ದರು. ಹೊಸದನ್ನು ಹುಡುಕಲು ಬಯಸುತ್ತಿದ್ದರು. ಅವರ ಹೆಸರಿನಲ್ಲಿ ಸ್ಯಾಟ ಲೈಟ್ ವರ್ಕ್ ಸ್ಟೇಶನ್ ಮಾಡುವ ಮೂಲಕ ಆಕಾಶದ ಎತ್ತರಕ್ಕೆ ಹೋಗುವ ಕೆಲಸ ಮಲ್ಲೇಶ್ವರಂ ಸ್ಕೂಲ್ ಮಾಡಿದೆ” ಎಂದಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಮಲ್ಲೇಶ್ವರಂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ವತಿಯಿಂದ ಸ್ಥಾಪಿಸಿರುವ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಅನ್ನು ಉದ್ಘಾಟಿಸಿ ಮಾತನಾಡಿದರು.
1/2 pic.twitter.com/tbemUaV6UW— CM of Karnataka (@CMofKarnataka) October 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.