News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಕಾಶಿ ತಮಿಳ್ ಸಂಗಮಮ್ʼ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ ಕೇಂದ್ರ

ನವದೆಹಲಿ: ವಾರಣಾಸಿ ಮತ್ತು ತಮಿಳುನಾಡು ನಡುವಿನ ಶತಮಾನಗಳಷ್ಟು ಹಳೆಯ ಜ್ಞಾನ ಮತ್ತು ಪ್ರಾಚೀನ ನಾಗರಿಕತೆಯ ಸಂಬಂಧವನ್ನು ಮರುಶೋಧಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ‘ಕಾಶಿ ತಮಿಳು ಸಂಗಮಮ್’ ಅನ್ನು‌ ಆಯೋಜಿಸುತ್ತಿದೆ. ನವೆಂಬರ್ 16 ರಿಂದ ಒಂದು ತಿಂಗಳ ಅವಧಿಯ ಕಾರ್ಯಕ್ರಮ ಇದಾಗಿದೆ.

ನವದೆಹಲಿಯಲ್ಲಿ ಈ ಕಾರ್ಯಕ್ರಮದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಿಕ್ಷಣ, ಆಧ್ಯಾತ್ಮಿಕತೆ, ತತ್ವಶಾಸ್ತ್ರ, ವ್ಯಾಪಾರ ಮತ್ತು ವಾಣಿಜ್ಯ, ಕೃಷಿ, ಉದ್ಯಮಶೀಲತೆ, ಕಲೆ ಮತ್ತು ಕುಶಲಕರ್ಮಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ 2400 ಕ್ಕೂ ಹೆಚ್ಚು ತಮಿಳು ಜನರು 12 ಗುಂಪುಗಳಲ್ಲಿ ಕಾಶಿಗೆ ಭೇಟಿ ನೀಡಲಿದ್ದಾರೆ. ಈ ಎರಡು ಪ್ರಾಚೀನ ನಗರಗಳು ಹಂಚಿಕೊಂಡಿರುವ ಪುರಾತನ ಜ್ಞಾನವನ್ನು ತಿಳಿದುಕೊಳ್ಳಲು ಎಂಟು ದಿನಗಳ ಕಾಲ ಅಲ್ಲಿರಲಿದ್ದಾರೆ ಎಂದಿದ್ದಾರೆ.

ಈ ಜನರು ರಾಮೇಶ್ವರಂ, ಚೆನ್ನೈ ಮತ್ತು ಕೊಯಮತ್ತೂರಿನಿಂದ ರೈಲಿನ ಮೂಲಕ ಬರುತ್ತಾರೆ ಎಂದು ಪ್ರಧಾನ್ ಹೇಳಿದರು. ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣಗಳು ಮತ್ತು ಉಪನ್ಯಾಸಗಳು ನಡೆಯಲಿವೆ ಎಂದರು.

ಈ ಸಂದರ್ಭದಲ್ಲಿ,  ಪ್ರಧಾನ್ ಅವರು  ನೋಂದಣಿ ಪ್ರಕ್ರಿಯೆಗಾಗಿ ವೆಬ್‌ಸೈಟ್ ಅನ್ನು ಸಹ ಪ್ರಾರಂಭಿಸಿದರು.

ಏಕ್ ಭಾರತ್ ಶ್ರೇಷ್ಠ ಭಾರತ್ ಚೌಕಟ್ಟಿನಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top