News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ತಜ್ಞೆಯಾಗಿ ಕನ್ನಡತಿ ನೇಮಕ

ಕೋಲಾರ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಮಕಾಲೀನ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತ ವಿಷಯದ ಸ್ವತಂತ್ರ ತಜ್ಞೆಯಾಗಿ ಕರ್ನಾಟಕದ ಕೋಲಾರ ಮೂಲದ ಪ್ರೊ ಕೆ ಪಿ ಅಶ್ವಿನಿ ಅವರು ನೇಮಕವಾಗಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಅವರ ನೇಮಕಾತಿಯನ್ನು ಅಕ್ಟೋಬರ್ 14ರಂದು ಅನುಮೋದಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಸ್ಥಾನಕ್ಕೆ ನೇಮಕವಾದ ಮೊದಲ ಏಷ್ಯಾ ಮತ್ತು ಮೊದಲ ಭಾರತೀಯ ಯುವತಿ ಎಂಬ ಹೆಗ್ಗಳಿಕೆಗೆ ಅಶ್ವಿನಿ ಅವರು ಪಾತ್ರರಾಗಿದ್ದಾರೆ.

ಅಶ್ವಿನಿ ಅವರಿಗೆ ಮೂರು ವರ್ಷ ಅಧಿಕಾರವಧಿ ಇರಲಿದೆ. ನವೆಂಬರ್ 1ರಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿ ಅವರು ವರ್ಣಬೇಧ, ಕ್ವೆನೋಫೋಬಿಯಾ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳ ಆಧಾರಿತವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಝಾಂಭಿಯಾದ ಇ. ತೆಂದಾಯಿ ಅಚುಮೆ ರಾಜೀನಾಮೆಯಿಂದ ತೆರೆವಾದ ಸ್ವತಂತ್ರ ತಜ್ಞರ ಸ್ಥಾನಕ್ಕೆ ಕೆ.ಪಿ. ಅಶ್ವಿನಿ ನಿಯೋಜನಗೊಂಡಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top