News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ‌ ಸ್ವದೇಶಿ 5ಜಿಯನ್ನು ಇತರ ದೇಶಗಳಿಗೂ ಪೂರೈಸಬಹುದು: ಸೀತಾರಾಮನ್

ವಾಷಿಂಗ್ಟನ್: ಭಾರತವು ತನ್ನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಮೂಲಸೌಕರ್ಯವನ್ನು ಪ್ರಾರಂಭಿಸಿದೆ ಮತ್ತು ಅದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್ (SAIS) ನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ ನಡೆಸಿದ ಸೀತಾರಾಮನ್, “ಭಾರತದ 5G   ಸಾರ್ವಜನಿಕರನ್ನು ತಲುಪಲು ಸಿದ್ಧವಾಗಿದೆ” ಎಂದು ಹೇಳಿದರು.

“ನಮ್ಮ ದೇಶದಲ್ಲಿ ನಾವು ಪ್ರಾರಂಭಿಸಿರುವ 5G ಸಂಪೂರ್ಣವಾಗಿ ಸ್ವತಂತ್ರವಾಗಿದೆ” ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

” ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ನಾವು ಈಗ 5G  ಬಯಸುವ ಯಾವುದೇ ದೇಶಕ್ಕಾದರೂ ಒದಗಿಸಬಹುದು. ನಮ್ಮ 5G ಬೇರೆಡೆಯಿಂದ ಆಮದು ಮಾಡಿಕೊಂಡಿಲ್ಲ. ಇದು ನಮ್ಮದೇ ಉತ್ಪನ್ನ” ಎಂದು ಸೀತಾರಾಮನ್ ಹೇಳಿದರು.

5G ಸೇವೆಗಳನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಯ್ದ ನಗರಗಳಲ್ಲಿ ಪ್ರಾರಂಭಿಸಿದರು ಮತ್ತು 2024 ರ ವೇಳೆಗೆ ಇಡೀ ರಾಷ್ಟ್ರವನ್ನು ಆವರಿಸುವ ಸಾಧ್ಯತೆಯಿದೆ

“5Gಯಲ್ಲಿ ಭಾರತದ ಸಾಧನೆಗಳ ಬಗ್ಗೆ ನಾವು ಅಪಾರವಾಗಿ ಹೆಮ್ಮೆಪಡಬಹುದು” ಎಂದು ಸೀತಾರಾಮನ್ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top