News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಶಾಲಾ ಶಿಕ್ಷಣ, ಸಾಕ್ಷರತಾ ಹಾಗೂ ಸಕಾಲ ಸಚಿವರ ಪೋರ್ಟಲ್ʼ ಬಿಡುಗಡೆ

ಬೆಂಗಳೂರು: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ (ಅ.13) ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು, ‘ಶಾಲಾ ಶಿಕ್ಷಣ ಮತ್ತು ಸಾಕ್ಷರತೆ’ ಇಲಾಖೆಯ ವೆಬ್ ಪೋರ್ಟಲ್* (EM Portal) ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ವ್ಯವಸ್ಥೆಯನ್ನು ಸೇವೆಗೆ ಸಮರ್ಪಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರ ಆಶಯದಂತೆ ಇಲಾಖೆಯ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಮತ್ತು ಇಲಾಖೆಯ ಕಾರ್ಯಕ್ಷಮತೆಯ ಸಂಪೂರ್ಣ ಚಿತ್ರಣವನ್ನು ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡಲು “ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರ ವೆಬ್ ಪೋರ್ಟಲ್” ಅನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಪೋರ್ಟಲ್ ನ ವೆಬ್ ವಿಳಾಸ / url https://schooleducationminister.karnataka.gov.in/ ಆಗಿರುತ್ತದೆ. ಈ ಪೋರ್ಟಲ್ ನಲ್ಲಿ ಇಲಾಖೆಯಲ್ಲಿ ಬಳಸುತ್ತಿರುವ ಬಹು ಐಟಿ ವ್ಯವಸ್ಥೆಗಳಿಂದ ಸಂಬಂಧಿಸಿದ ಪ್ರಸ್ತುತ ಮಾಹಿತಿಯನ್ನು ಸಂಯೋಜಿಸಿ ಮಾನ್ಯ ಸಚಿವರಿಗೆ ಹಾಗೂ ಇಲಾಖೆಯ ಉನ್ನತ ಮಟ್ಟದ ಅಧಿಕಾರಿ ವರ್ಗದವರಿಗೆ ಸದರಿ ಮಾಹಿತಿಗಳನ್ನು ಪ್ರಸ್ತುತ ಪಡಿಸಿ ಇಲಾಖೆಯ ಕಾರ್ಯಕ್ಷಮತೆ ಮತ್ತು ಪ್ರಗತಿಯ ನೋಟವನ್ನು ಆಳಕ್ಕೆ ಇಳಿದು ಸೂಕ್ಷ್ಮ ಮಟ್ಟದ ಮಾಹಿತಿಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಮಾನ್ಯ ಸಚಿವರ ನಿರ್ದೇಶನದಂತೆ ಶಿಕ್ಷಣ ಸಚಿವರ ಪೋರ್ಟಲ್ ರಲ್ಲಿ ಸಿಗುವ ಯಾವುದೇ ಮಾಹಿತಿಯು ರಿಯಲ್ ಟೈಮ್ ಮಾಹಿತಿಯಾಗಿರಲು ಉದ್ದೇಶಿಸಿದ್ದು ಸದರಿ ಪ್ರಕ್ರಿಯೆಗಾಗಿ ಇಲಾಖಾ ತಂತ್ರಾಂಶವಾದ ಸ್ಯಾಟ್ಸ್ ಪೋರ್ಟಲ್ ಹಾಗೂ ಇಲಾಖೆಗೆ ಸಂಬಂಧಿಸಿದ ವಿವಿಧ ತಂತ್ರಾಂಶಗಳಿಂದ ಮುಖೇನ ಬೇಕಾದ ಮಾಹಿತಿಯನ್ನು ವೆಬ್- ಎಪಿಐ ಮುಖೇನ ಸೆಳೆಯಲಾಗುತ್ತಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರ ಪೋರ್ಟಲ್ ಒದಗಿಸಲಾಗಿರುವ ಪ್ರಮುಖ ಮೆನ್ಯುಗಳ ಸಂಕ್ಷಿಪ್ತ ವಿವರಗಳು ಕೆಳಕಾಣಿಸಿದಂತೆ ಇವೆ

• ಸಚಿವರ ಡ್ಯಾಶ್ ಬೋರ್ಡ್ : ಈ ವೆಬ್ ಪುಟದಲ್ಲಿ ನೈಜ ಸಮಯದಲ್ಲಿ ಅಪ್ಡೇಟ್ ಆಗುವಂತಹ ದತ್ತಾಂಶವನ್ನು ಡೇಟಾ ಕಾರ್ಡ್ಸ್ ಗಳಲ್ಲಿ ನೀಡಲಾಗಿದ್ದು ಇದರಲ್ಲಿನ ದತ್ತಾಂಶಗಳು ಇಲಾಖೆಯ ವಿವಿಧ ತಂತ್ರಾಂಶಗಳಿಂದ ವೆಬ್ -ಎ.ಪಿ.ಐ ಮುಖೇನ ಪಡೆದು update ಮಾಡಲಾಗುತ್ತಿದೆ.

• ಮಾನ್ಯ ಸಚಿವರ ನಿರ್ದೇಶನಗಳು (ಸಚಿವರ ಲಾಗಿನ್ ಮುಖೇನ) : ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹೊರಡಿಸಿದ ನಿರ್ದೇಶನಗಳನ್ನು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಮಯ ನಿಗದಿಗೊಳಿಸಿ ಕಳುಹಿಸಬಹುದಾಗಿದೆ ಈ ನಿರ್ದೇಶನವನ್ನು, ಅಧಿಕಾರಿಗಳು ತಮ್ಮ ಅನುಪಾಲನೆಯನ್ನು ನಮೂದಿಸಬಹುದಾಗಿದೆ. ಹೊರಡಿಸಿರುವ ನಿರ್ದೇಶನಗಳಿಗೆ ಮಾನ್ಯ ಸಚಿವರ ಕಚೇರಿಯಲ್ಲಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬಹುದು.

1. ಮಾಧ್ಯಮ ಗ್ರಂಥಾಲಯ :
ಅ) ಫೋಟೋ ಗ್ಯಾಲರಿ : ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಅಧಿಕಾರಿ ವರ್ಗದವರೊಂದಿಗೆ, ಇಲಾಖಾ ಸಿಬಂದಿಗಳೊಂದಿಗೆ, ಶಿಕ್ಷಕರೊಂದಿಗೆ ಹಾಗೂ ಸಾರ್ವಜನಿರೊಂದಿಗೆ ನಡೆಸಿದ ಮಾತು ಕತೆ,ಸಂವಾದ, ಚರ್ಚೆ, ಹಾಗೂ ಸಭೆಗಳ ಸಂಪೂರ್ಣ ಚಿತ್ರಣವನ್ನು ಇಲ್ಲಿ ವೀಕ್ಷಿಸಬಹುದು.

ಆ) ವಿಡಿಯೋ ಗ್ಯಾಲರಿ : ಮಾನ್ಯ ಸಚಿವರು ಅಧಿಕಾರಿ ವರ್ಗದವರೊಂದಿಗೆ, ಇಲಾಖಾ ಸಿಬಂದಿಗಳೊಂದಿಗೆ, ಶಿಕ್ಷಕರೊಂದಿಗೆ ಹಾಗೂ ಸಾರ್ವಜನಿರೊಂದಿಗೆ ನಡೆಸಿದ ಮಾತು ಕತೆ,ಸಂವಾದ, ಚರ್ಚೆ, ಹಾಗೂ ಸಭೆ ಸಮಾರಂಭ ವಿಡಿಯೋ ತುಣಕುಗಳನ್ನು ಇಲ್ಲಿ ವೀಕ್ಷಿಸಬಹುದು.

ಇ) ಮಾಧ್ಯಮ ಸಂಕ್ಷಿಪ್ತ : ಮಾಧ್ಯಮ ಮಿತ್ರರು ಇಲಾಖೆಯಿಂದ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಇಲ್ಲಿ ವೀಕ್ಷಿಸಬಹುದು.

ಈ) ಸಚಿವರಿಗೆ ಪತ್ರ ಬರೆಯಿರಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾರ್ವಜನಿಕರು, ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಣ ಕ್ಷೇತ್ರದಲ್ಲಿನ ಆಗು ಹೋಗುಗಳ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು, ಸ್ವಯಂ ಸೇವಾ ಸಂಸ್ಥೆಗಳು ಮಾನ್ಯ ಸಚಿವರಿಗೆ ಪತ್ರ ಬರೆಯಬಹುದು, ತದನಂತರ ತಮ್ಮ ಪತ್ರ/ದೂರಿನ ಸ್ಥಿತಿಗತಿಗಳನ್ನು ಆನ್ ಲೈನ್ ನಲ್ಲಿಯೇ ವೀಕ್ಷಿಸಲು ಅನುವು ಮಾಡಿದೆ.

ಉ) ಸಾಮಾಜಿಕ ಮಾಧ್ಯಮ : ಮಾನ್ಯ ಸಚಿವರಿಗೆ ಸಂಬಂಧಿಸಿದ ಟ್ವಿಟ್ಟರ್ ಹಾಗೂ ಫೇಸ್ಬುಕ್ ಖಾತೆಗಳಲ್ಲಿ ಅಪ್ಡೇಟ್ ಮಾಡಿರುವ ಮಾಹಿತಿಗಳನ್ನು ಒಂದೇ ಪುಟದಲ್ಲಿ ವೀಕ್ಷಿಸಬಹುದು.

2. ಶಾಲೆಗಳು : ಈ ವಿಭಾಗವು ಶಾಲೆಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಶಾಲೆಗಳ ಸಂಖ್ಯೆ, ಶಾಲೆಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಶಾಲಾ ಸೌಲಭ್ಯಗಳು ಮತ್ತು ಶಾಲಾ ಶಿಕ್ಷಕರ ಕುರಿತ ಮಾಹಿತಿಯನ್ನು ಡ್ರಿಲ್-ಡೌನ್ ಮಾಡುವ ಮೂಲಕ ಶೈಕ್ಷಣಿಕ ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದವರೆಗಿನ ವಿವರಗಳನ್ನು ಪಡೆಯಬಹುದಾಗಿದೆ.

ಅ)ವಿದ್ಯಾರ್ಥಿಗಳು : ಈ ವಿಭಾಗವು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪ್ರತ್ಯೇಕವಾಗಿ ಬಾಲಕ ಮತ್ತು ಬಾಲಕಿಯರ ಮಾಹಿತಿ ಲಭ್ಯವಿದೆ. ಜಿಲ್ಲಾವಾರು ಮತ್ತು ಬ್ಲಾಕ್ ವಾರು ಮಾಹಿತಿಯೊಂದಿಗೆ, ಶಾಲೆಗಳ ವಿಧಗಳು, ಪ್ರಕಾರಗಳು ಮತ್ತು ಮಾಧ್ಯಮಗಳ ಬಗ್ಗೆ ಡ್ರಿಲ್-ಡೌನ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಆ)ಶಿಕ್ಷಕರು(ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು) : ಶಿಕ್ಷಕರಿಗೆ ಸಂಬಂಧಿಸಿದ ವಿವರಗಳನ್ನು ಈ ವಿಭಾಗವು ಒದಗಿಸುತ್ತದೆ. ಶಿಕ್ಷಕರ ಸಂಖ್ಯೆ, ವಿಷಯವಾರು ಶಿಕ್ಷಕರ ಸಂಖ್ಯೆ, ಶಿಕ್ಷಕರ ತರಬೇತಿ ಮತ್ತು ಶಿಕ್ಷಕ ಮಿತ್ರ ಕುರಿತು ಮಾಹಿತಿಯನ್ನು ಡ್ರಿಲ್-ಡೌನ್ ಮಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದವರೆಗಿನ ವಿವರವನ್ನು ಪಡೆದುಕೊಳ್ಳಲು ಅವಕಾಶವಿದೆ.

ಇ)ಪರೀಕ್ಷೆಗಳು : ಈ ವಿಭಾಗವು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಉದಾಹರಣೆಗೆ – ಒಟ್ಟಾರೆ ಫಲಿತಾಂಶಗಳು, ಶೇಕಡಾವಾರು ಉತ್ತೀರ್ಣ, ಶಾಲೆಯ ಪ್ರಕಾರವಾರು ಫಲಿತಾಂಶ, ಲಿಂಗವಾರು ಫಲಿತಾಂಶ, ಸಾಮಾಜಿಕ ವರ್ಗವಾರು ಫಲಿತಾಂಶ, ಪ್ರದೇಶವಾರು (ನಗರ/ಗ್ರಾಮೀಣ) ಫಲಿತಾಂಶ, ಮಾಧ್ಯಮವಾರು ಫಲಿತಾಂಶ, ಗ್ರೇಡ್‌ ವಾರು ಫಲಿತಾಂಶ, ಜಿಲ್ಲಾವಾರು ಫಲಿತಾಂಶ ಹಾಗೂ ಪದವಿಪೂರ್ವ ಶಿಕ್ಷಣ ಮಂಡಳಿಯ ಫಲಿತಾಂಶವನ್ನು ಕಾಲೇಜುವಾರು, ಮಾಧ್ಯಮವಾರು ಮತ್ತು ಫಲಿತಾಂಶದ ವಿವರಗಳನ್ನು ಪಡೆಯಬಹುದಾಗಿದೆ.

3. ಇಲಾಖೆಯ ಆಡಳಿತ : ಈ ವಿಭಾಗದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದ ಜಿಲ್ಲಾವಾರು ಅನುದಾನದ ವಿವರ, ದಾಖಲಾತಿ ವಿವರ ಮತ್ತು ಅಡುಗೆಯವರು(ಸಿ.ಸಿ.ಹೆಚ್)ರವರ ವಿವರಗಳು, ಮತ್ತು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ವಿತರಿಸಿರುವ ಉಚಿತ ಪುಸ್ತಕಗಳ ವಿವರಗಳು ಇತ್ಯಾದಿ ಲಭ್ಯವಾಗುತ್ತದೆ.

4. ಯೋಜನೆ ಮತ್ತು ಆಯವ್ಯಯ : ಇಲಾಖೆಯ ವಿವಿಧ ಯೋಜನೆಗಳು ಮತ್ತು ಆಯವ್ಯಯದಡಿಯಲ್ಲಿ ಮಾಡಲಾದ ಈ ಪ್ರಕಾರದ ಅವಕಾಶಗಳ ವಿವರ ಲಭ್ಯವಿದೆ –ಮುಂದುವರೆದ ಯೋಜನೆಗಳ ವರ್ಷವಾರು ಅನುದಾನದ ವಿವರ, ಅನುದಾನ ಬಿಡುಗಡೆ ಮತ್ತು ಬಳಕೆಯ ಮಾಹಿತಿ, ಹೊಸ ಯೋಜನೆಗಳ ಮಾಹಿತಿ, ನೆರೆ ಪೀಡಿತ ಶಾಲೆಗಳ ಪುನರ್ ನಿರ್ಮಾಣ, ಈ ಎಲ್ಲಾ ವಿವರಗಳು ಜಿಲ್ಲಾ, ಬ್ಲಾಕ್ ಮತ್ತು ಶಾಲಾ ಹಂತದವರೆಗೆ ಲಭ್ಯವಾಗುತ್ತದೆ.

5. ಲೋಕ ಶಿಕ್ಷಣ : ಈ ವಿಭಾಗದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಆರ್ಥಿಕ ಅಂಶಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಮಾಹಿತಿ ಲಭ್ಯವಿದೆ; ಯೋಜನಾವಾರು ಅನುದಾನದ ವಿವರ, ಬಿಡುಗಡೆಯಾದ ಅನುದಾನ ಮತ್ತು ವರ್ಷವಾರು ಅನುದಾನದ ಬಳಕೆ ಹಾಗೂ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನದ ವಿವರ.

6. ಗ್ರಂಥಾಲಯ : ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ವಿವರ ಈ ವಿಭಾಗದಲ್ಲಿ ಲಭ್ಯವಾಗುತ್ತದೆ – ಡಿಜಿಟಲ್ ಲೈಬ್ರರಿ ಅನುಷ್ಠಾನಕ್ಕೆ ಅನುಮೋದಿತ ಅನುದಾನ, ಬಿಡುಗಡೆ ಹಾಗೂ ವೆಚ್ಚ ಹಾಗೂ ಜಿಲ್ಲಾವಾರು ವಿವಿಧ ಗ್ರಂಥಾಲಯಗಳ ಸಂಖ್ಯೆಯ ವಿವರ ಲಭ್ಯವಾಗುತ್ತದೆ.

• ದತ್ತಾಂಶ ವಿಶ್ಲೇಷಣೆ : ಈ ವಿಭಾಗದಲ್ಲಿ ಮಾಹಿತಿಗಳನ್ನು ಬಾರ್ ಚಾರ್ಟ್ ರೂಪದಲ್ಲಿ ಪಡೆದು ತುಲನಾತ್ಮಕವಾಗಿ ವಿಮರ್ಶಿಸಲು ಅನೂಕೂಲವಾಗುವಂತೆ ವಿನ್ಯಾಸಗೊಳಿಸಿದೆ. ಉದಾಹರಣೆಗೆ ವಿವಿಧ ಶಾಲೆಗಳ ಮಾಹಿತಿಗೆ ಸಂಬಂಧಿಸಿದಂತೆ ವಿಶ್ಲೇಷಣಾತ್ಮಕ ವರದಿಯನ್ನು ಈ ವಿಭಾಗದಲ್ಲಿ ಪಡೆಯಬಹುದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top