News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 1st December 2022


×
Home About Us Advertise With s Contact Us

ಅನಂತಪುರಂ ಅನಂತಪದ್ಮನಾಭಸ್ವಾಮಿ ದೇಗುಲದ ʼಬಬಿಯಾʼ ಇನ್ನಿಲ್ಲ

ತಿರುವನಂತಪುರಂ: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಕೊಳದಲ್ಲಿದ್ದ ದೈವಸ್ವರೂಪಿ ಪವಿತ್ರ ಮೊಸಳೆ ಬಬಿಯಾ ಮೊಸಳೆ ಭಾನುವಾರ ರಾತ್ರಿ ನಿಧನ ಹೊಂದಿದೆ.  ಕಳೆದ ಎರಡು ದಿನಗಳಿಂದ ಮೊಸಳೆ ಕಾಣಿಸಿಕೊಂಡಿರಲಿಲ್ಲ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದರು.

ಮೊಸಳೆ ಸುಮಾರು 75 ವರ್ಷಗಳಿಂದ ಇದೇ ಕೊಳದಲ್ಲಿತ್ತು, ಇದುವರೆಗೆ ಅದು ಯಾರಿಗೂ ತೊಂದರೆಕೊಟ್ಟ ಉದಾಹರಣೆಯೇ ಇಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನೇ ತಿಂದು ಬಬಿಯಾ ಜೀವಿಸುತ್ತಿತ್ತು. ಪೂಜೆ ಬಳಿಕ ಅರ್ಚಕರು ಕರೆದಾಗ ಹೊರಬರುತ್ತಿದ್ದ ಬಬಿಯಾ ನೈವೇದ್ಯ ತಿಂದು ಮತ್ತೆ ನೀರಿನೊಳಗೆ ಹೋಗುತ್ತಿತ್ತು. ಪ್ರತಿದಿನ ಎರಡು ಬಾರಿ ಬಬಿಯಾ ನೈವೇದ್ಯ ಸ್ವೀಕರಿಸುತ್ತಿತ್ತು ಎನ್ನಲಾಗಿದೆ.

 ಬಬಿಯಾ ಸಸ್ಯಾಹಾರಿ ಮೊಸಳೆ ಎಂದೆಂದಿಗೂ ಪ್ರಖ್ಯಾತ.  ಕೊಳ ಮತ್ತು ಸುತ್ತಲ ಆವರಣದಲ್ಲಿ ಕಾಲ ಕಳೆಯುತ್ತಿದ್ದ ಬಬಿಯಾ ಒಮ್ಮೆ ದೇವಸ್ಥಾನದ ಪ್ರಾಂಗಣದೊಳಗೆ ಬಂದು ದೇವರ ದರ್ಶನ ಪಡೆದಿತ್ತು.  ಕೊಂಚ ಹೊತ್ತು ಅಲ್ಲೇ ಸಮಯ ಕಳೆದಿತ್ತು. ಈ ವೇಳೆ ಪ್ರಧಾನ ಅರ್ಚಕರು ಕೈ ಮುಗಿದು ದೇವರ ಮಂತ್ರ ಪಠಿಸಿದ್ದಾರೆ. ಬಳಿಕ  ಬಬಿಯಾ ಕೊಳಕ್ಕೆ ಹಿಂತಿರುಗಿತ್ತು. ಈ ವೇಳೆ ಅರ್ಚಕ ಬಬಿಯಾದ ಫೋಟೋ ಕ್ಲಿಕ್ಕಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top