ನವದೆಹಲಿ: ಇಂದು ವಾಯುಪಡೆ 90 ನೇ ವರ್ಷವನ್ನು ಆಚರಿಸುತ್ತಿದೆ. ಈ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, “ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯಲ್ಲಿನ ಅಧಿಕಾರಿಗಳಿಗೆ ವೆಪನ್ ಸಿಸ್ಟಮ್ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಘೋಷಿಸಲು ವಿಶೇಷವೆನಿಸಿದೆ” ಎಂದಿದ್ದಾರೆ.
ಇದಲ್ಲದೆ, ಅವರು ಅಗ್ನಿವೀರ್‌ಗಳನ್ನು ಐಎಎಫ್‌ಗೆ ಸೇರ್ಪಡೆಗೊಳಿಸುವ ಬಗ್ಗೆಯೂ ಅವರುಮಾತನಾಡಿದರು.
“ಐಎಎಫ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಪ್ರತಿಯೊಬ್ಬ ಅಗ್ನಿವೀರ್ ಸರಿಯಾದ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದ್ದೇವೆ. ಈ ವರ್ಷ ಡಿಸೆಂಬರ್‌ನಲ್ಲಿ, ನಾವು ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರ್ ವಾಯುವನ್ನು ಸೇರಿಸುತ್ತೇವೆ. ಈ ಸಂಖ್ಯೆ ಮುಂಬರುವ ವರ್ಷಗಳಲ್ಲಿ ಏರಲಿದೆ” ಎಂದಿದ್ದಾರೆ.
“ಅಗ್ನಿಪಥ್ ಯೋಜನೆಯ ಮೂಲಕ ವಾಯುಸೇನೆಗೆ ವೈಮಾನಿಕ ಯೋಧರನ್ನು ಸೇರಿಸುವುದು ನಮಗೆಲ್ಲರಿಗೂ ಸವಾಲಾಗಿದೆ. ಆದರೆ ಅದಕ್ಕಿಂತ ಮುಖ್ಯವಾಗಿ, ಭಾರತದ ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅದನ್ನು ರಾಷ್ಟ್ರದ ಸೇವೆಗೆ ಬಳಸಲು ಇದು ನಮಗೆ ಒಂದು ಅವಕಾಶವಾಗಿದೆ” ಎಂದಿದ್ದಾರೆ.
ಸುಮಾರು 80 ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಚಂಡೀಗಢದ ಸುಖನಾ ಲೇಕ್ ಸಂಕೀರ್ಣದಲ್ಲಿ ಏರ್ ಫೋರ್ಸ್ ಡೇ ಫ್ಲೈ-ಪಾಸ್ಟ್‌ನಲ್ಲಿ ಭಾಗವಹಿಸಲಿವೆ.
On this historic occasion, it's my privilege to announce that Govt has approved the creation of a weapon system branch for the officers in the Indian Air Force: IAF chief Air Chief Marshal Vivek Ram Chaudhari, on the 90th-anniversary celebration of #IndianAirForce, in Chandigarh pic.twitter.com/0mVJR4gBbF
— ANI (@ANI) October 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.