News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಂಗ್ರೆಸ್‌ ವಿರುದ್ಧ ಫೋಸ್ಟರ್‌ ಹೋರಾಟ ಆರಂಭಿಸಿದೆ ಬಿಜೆಪಿ

ಬೆಂಗಳೂರು: ಕರ್ನಾಟಕ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಪೋಸ್ಟರ್ ಹೋರಾಟವನ್ನು ಆರಂಭಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಿಎಫ್ಐ ಒಲವು ಹಿಂದೂ ವಿರೋಧಿ ಧೋರಣೆ ಸೇರಿದಂತೆ ಹಲವು ವಿಚಾರಗಳನ್ನು ಜನರ ಮುಂದಿಟ್ಟಿದೆ.

ಪೇ ಸಿಎಂ ಮೂಲಕ ಮುಖ್ಯಮಂತ್ರಿಗಳ ಮಾನಹಾನಿಗೆ ಪ್ರಯತ್ನಿಸಿದ ಕಾಂಗ್ರೆಸ್ ಗೆ ಸೆಡ್ ಹೊಡೆಯಲು ಬಿಜೆಪಿ ಈ ಪೋಸ್ಟರ್ ಅಭಿಯಾನವನ್ನು ಆರಂಭಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್ ಅವರು, “ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ ಪಿಎಫ್‌ಐ ನಿಷೇಧ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಇದೇ PFI, KFD ಬಗ್ಗೆ 1,600 ಕೇಸ್ ಹಾಕಿದ್ದರು. 10-12-2012 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು PFIನವರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೋಲಿಸ್ ಇಲಾಖೆ ರಿಪೋರ್ಟ್ ಕೊಡುತ್ತೆ. ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ. ಆದರೂ ಸಿದ್ದರಾಮಯ್ಯ ಈ ಎಲ್ಲಾ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡುತ್ತಾರೆ” ಎಂದಿದ್ದಾರೆ.

“ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದಾರೆ. PFI ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ” ಎಂದಿದ್ದಾರೆ.

“ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ.  ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡುವುದಕ್ಕೆ ಸಿದ್ದರಾಗಿದ್ದವರು ಈ ಯಾತ್ರೆ ಮಾಡುತ್ತಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಬಳಿಕ 370 ಆರ್ಟಿಕಲ್ ತೆಗೆಯುವ ಮೂಲಕ ಭಾರತದ ಅಖಂಡತೆಯನ್ನು ಎತ್ತಿಹಿಡಿದರು.ಲಾಲ್ ಚೌಕ್‌ನಲ್ಲಿ ಭಾರತದ ತಿರಂಗ ಹಾರಿಸಿದ್ದು ಮೋದಿ ಬಂದಮೇಲೆ. ಮೊದಲು ಅಲ್ಲಿ ಬಾಂಬ್, ಕಲ್ಲು ಹಾರಿಸುವವರು ಮಾತ್ರ ಇದ್ದರು. ಇದು ಭಾರತ್ ಜೋಡೋ ಅಲ್ಲ, ಕ್ಷಮಿಸಿ ಬಿಡಿ ನಮ್ಮನ್ನು ಯಾತ್ರೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top