ಮುಂಬಯಿ: ಟ್ವಿಟರ್ ಮೂಲಕ ಪ್ರೇರಣದಾಯಕ ವಿಡಿಯೋಗಳನ್ನು ಆಕರ್ಷಕ ಒಕ್ಕಣೆಗಳೊಂದಿಗೆ ಹಂಚಿಕೊಂಡು ಎಲ್ಲರ ಗಮನ ಸೆಳೆಯುವ ಉದ್ಯಮಿ ಆನಂದ್ ಮಹೀಂದ್ರ ಅವರು ಇಂದು ಮತ್ತೊಂದು ಅಂತಹುದೇ ಟ್ವಿಟ್ ಮಾಡಿದ್ದಾರೆ. ಈ ಬಾರಿ ಅವರು ನೂರು ವರ್ಷ ಪ್ರಾಯದ ಮಾಜಿ ಯೋಧರೊಬ್ಬರ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ಎಲ್ಲರ ಮನೆಗೆದ್ದಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಡ್ರಿಲ್ ಇನ್ಸ್ಟ್ರಕ್ಟರ್ ಆಗಿ ನಿವೃತ್ತಿಗೊಂಡಿರುವ ಸುಬೇದಾರ್ ಮೇಜರ್ ಗೋವಿಂದ್ ಸ್ವಾಮಿ ಅವರ 100ನೇ ಜನ್ಮದಿನವನ್ನು ಆಚರಿಸಲು ಬೆಂಗಳೂರಿನಲ್ಲಿ ಮದ್ರಾಸ್ ಸಪ್ಪೆರ್ಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರ ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ನೂರು ವರ್ಷದ ಸ್ವಾಮಿ ಅವರು ಇತರ ಸೇನಾಧಿಕಾರಿಗಳಿಗೆ ಸೆಲ್ಯೂಟ್ ಮಾಡುವ ದೃಶ್ಯ ರೋಮಾಂಚನಗೊಳಿಸುತ್ತದೆ ಎಂದು ಆನಂದ್ ಮಹಿಂದ್ರ ಹೇಳಿದ್ದಾರೆ. ಅಲ್ಲದೆ ಈ ವಿಡಿಯೋಗೆ ಅವರು ‘ಮಂಡೆ ಮೋಟಿವೇಷನ್’ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಮೇಜರ್ ಸ್ವಾಮಿ ಅವರನ್ನು ಇತರರ ಸಹಾಯದೊಂದಿಗೆ ಕಾರಿನಿಂದ ಇಳಿಸಿ ವೀಲ್ ಚೇರ್ ಮೂಲಕ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲಾಗಿದೆ. ಅಭಿನಂದನೆಯ ಬಳಿಕ ಅವರು ಕಷ್ಟಪಟ್ಟು ಎದ್ದುನಿಂತು ಸೆಲ್ಯೂಟ್ ಮಾಡುವ ದೃಶ್ಯ ಎಲ್ಲರನ್ನು ಬೆರಗುಗೊಳಿಸುತ್ತದೆ.
“ಸುಬೇದಾರ್ ಮೇಜರ್ ಸ್ವಾಮಿ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಡ್ರಿಲ್ ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. 100ನೇ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಸನ್ಮಾನ ಅವರು ಏಳು ಭಾರತೀಯ ಸೇನಾ ಜನರಲ್ ಗಳಿಗೆ ಇನ್ಸ್ಟ್ರಕ್ಟ್ ಸೇನೆ ಮತ್ತು ಭಾರತೀಯ ಸಂಪ್ರದಾಯದಂತೆ ಗುರುವಿಗೆ ಗೌರವಾರ್ಪಣೆ ಮಾಡಲಾಗಿದೆ. ಅವರು ಸೆಲ್ಯೂಟ್ ಮಾಡಿದಾಗ ನನಗೆ ರೋಮಾಂಚನವಾಯಿತು. ಇದು ಸೋಮವಾರದ ಪ್ರೇರಣೆ” ಎಂದಿದ್ದಾರೆ.
“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation pic.twitter.com/Oa6gLkjjNR
— anand mahindra (@anandmahindra) October 3, 2022
242nd #MadrasSappersDay was celebrated at #MEG&C with traditional fervour & gaiety. On this momentous occasion, Commandant MEG&C paid homage to Fallen Heros at MEG&C War Memorial and extended his best wishes to All Ranks, Veterans & Families of #MadrasSappers pic.twitter.com/K61cxS7eLL
— Southern Command INDIAN ARMY (@IaSouthern) September 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.