ನವದೆಹಲಿ: 2020 ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಸಿದ್ಧ ನಟಿ ಆಶಾ ಪರೇಖ್ ಅವರಿಗೆ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ಘೋಷಣೆ ಮಾಡಿದ್ದಾರೆ.
ಆಶಾ ಪರೇಖ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಆದರ್ಶಪ್ರಾಯ ಜೀವಮಾನದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲು ದಾದಾಸಾಹೇಬ್ ಫಾಲ್ಕೆ ಸೆಲೆಕ್ಷನ್ ಜ್ಯೂರಿ ನಿರ್ಧರಿಸಿದೆ ಎಂದು ಘೋಷಿಸಲು ನನಗೆ ಗೌರವವೆನಿಸುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 30ರಂದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಚಿವರು ಪ್ರಕಟಿಸಿದರು.
ಆಶಾ ಪರೇಖ್ ಪ್ರಖ್ಯಾತ ಹಿಂದಿ ಚಲನಚಿತ್ರ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿ ಮತ್ತು ಒಬ್ಬ ನಿಪುಣ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದಾರೆ. ಬಾಲನಟಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ‘ದಿಲ್ ದೇಕೆ ದೇಖೋ’ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಬಳಿಕ ಕತಿ ಪತಂಗ್, ತೀಸ್ರಿ ಮಂಜಿಲ್, ಲವ್ ಇನ್ ಟೋಕಿಯೋ, ಆಯಾ ಸಾವನ್ ಝೂಮ್ ಕೆ, ಆನ್ ಮಿಲೋ ಸಜ್ನಾ, ಮೇರಾ ಗಾಂವ್ ಮೇರಾ ದೇಶ್ ಸೇರಿದಂತೆ 95 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಪರೇಖ್ ಅವರಿಗೆ 1992 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು 1998-2001 ರವರೆಗೆ ಚಲನಚಿತ್ರ ಪ್ರಮಾಣೀಕರಣಕ್ಕಾಗಿ ಕೇಂದ್ರೀಯ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.