
ನವದೆಹಲಿ: ಮೂಲಭೂತವಾದಿ ಸಂಘಟನೆ ಪಿಎಫ್ಐ ವಿರುದ್ಧ ರಾಷ್ಟ್ರೀಯ ತನಿಖಾ ದಳವು ಕಾರ್ಯಾಚರಣೆಯನ್ನು ನಡೆಸಿದ ಬಳಿಕ ಆ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ.
ಅತಿ ಶೀಘ್ರದಲ್ಲಿ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ಅದು ಇತರ ರಾಷ್ಟ್ರವಾದಿ ಸಂಘಟನೆಗಳ ಜೊತೆ ಸಭೆ ನಡೆಸಿದ ಬಳಿಕ ಈ ಮನವಿಯನ್ನು ಮಾಡಿದೆ.
“ಪಿ ಎಫ್ ಐ ಸಂಘಟನೆ ಅಪಾಯಕಾರಿ ಸಂಘಟನೆ ಎಂದು ಗೊತ್ತಾದ ಬಳಿಕವೂ ಅದನ್ನು ನಿಷೇಧಿಸಲು ವಿಳಂಬ ಯಾಕೆ? ಅದರ ಬ್ಯಾಂಕ್ ಖಾತೆಗಳನ್ನು ಯಾಕೆ ಇದುವರೆಗೆ ಮುಟ್ಟುಗೋಲು ಹಾಕಿಲ್ಲ? ಅದರ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಿಲ್ಲ? ಹಿಂಸೆಯಲ್ಲಿ ಭಾಗಿಯಾಗಿರುವ ಅದರ ನಾಯಕರ, ಸದಸ್ಯರ ವಿರುದ್ಧ ಕಠಿಣ ಶಿಕ್ಷೆಯನ್ನು ಯಾಕೆ ಜರುಗಿಸಿಲ್ಲ? ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಪ್ರಶ್ನೆ ಮಾಡಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರವು ಸುಪ್ರೀಂಕೋರ್ಟಿಗೆ ಹೇಳಿಕೆ ನೀಡಿ, ಕೆಲವು ರಾಜ್ಯಗಳಲ್ಲಿ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲಾಗಿದೆ ಮತ್ತು ದೇಶ ವ್ಯಾಪಿಯಾಗಿ ಅದರ ನಿಷೇಧವನ್ನು ಪರಿಗಣಿಸಲಾಗುತ್ತಿದೆ ಎಂದಿತ್ತು.
ಮುಸ್ಲಿಂ ರಾಷ್ಟ್ರೀಯ ಮಂಚ್ ರಾಷ್ಟ್ರೀಯ ಸಂಯೋಜಕರಾದ ಮೊಹಮ್ಮದ್ ಅಫ್ಜಲ್ ಮತ್ತು ಶಹೀದ್ ಅಕ್ಟರ್ ಅವರು ಇತರ ರಾಷ್ಟ್ರವಾದಿ ಸಂಘಟನೆಗಳ ಜೊತೆ ಸಭೆ ನಡೆಸಿದ ಬಳಿಕ ಹೇಳಿಕೆಯನ್ನು ನೀಡಿ, ಪಿ ಎಫ್ ಐ ಭಯೋತ್ಪಾದನಾ ಸಂಘಟನೆ ಸೆಮಿಗಿಂತಲೂ ಅಪಾಯಕಾರಿ. ಈ ಸಂಘಟನೆಯನ್ನು ನಿಷೇಧಿಸಲು ಎನ್ಐಎ ನಡೆಸಿದ ದಾಳಿಯ ಸಂದರ್ಭದಲ್ಲಿ ದೊರೆತ ಸಾಕ್ಷಿಗಳು ಈ ಸಂಘಟನೆಯನ್ನು ನಿಷೇಧಿಸಲ ಸಾಕು. ಈ ಸಾಕ್ಷಿಗಳು ಮತ್ತು ಪ್ರತಿಭಟನೆಯ ವೇಳೆ ಕೇಳಿ ಬಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಪಿ ಎಫ್ ಐ ಒಂದು ಭಯೋತ್ಪಾದನಾ ಸಂಘಟನೆ ಮತ್ತು ಅದು ವಿದೇಶದಿಂದ ಹಣ ಸಂಗ್ರಹಿಸುತ್ತದೆ ಎಂಬುದನ್ನು ಸಾರಿ ಹೇಳುತ್ತವೆ ಎಂದಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


