ಸೇನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( ಡಿಆರ್ಡಿಓ)ಗೆ ಇತ್ತೀಚಿಗೆ ಮಹಿಳೆಯೊಬ್ಬರು ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾಗಿದ್ದು ನಮಗೆ ಗೊತ್ತೆ ಇದೆ. ಈ ಉನ್ನತ ಸ್ಥಾನವನ್ನು ಅಲಂಕರಿಸಿದ ದೇಶದ ಪ್ರಥಮ ಮಹಿಳೆ ಇವರು. ಅವರ ಸಾಧನೆಯ ಹಾದಿಯನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕು.
ಪ್ರಮುಖ ವಿಜ್ಞಾನಿಯಾಗಿರುವ ಜೆ.ಮಂಜುಳಾ ಈಗ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( ಡಿಆರ್ಡಿಓ)ದ ಮೊದಲ ಮಹಿಳಾ ಡೈರೆಕ್ಟರ್ ಜನರಲ್ ಆಗಿದ್ದಾರೆ. ಈ ಅತ್ಯುನ್ನತ ಸ್ಥಾನಕ್ಕೆ ನೇಮಕವಾಗುವ ಮೂಲಕ ಅವರು ಹೊಸ ಇತಿಹಾಸವನ್ನೇ ಬರೆದಿದ್ದಾರೆ.
ಡಿಆರ್ಡಿಓದ ಪ್ರಮುಖ ಸಮೂಹವಾದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ಸಿಸ್ಟಮ್ನ ಮುಖ್ಯಸ್ಥ ಸ್ಥಾನವನ್ನು ಇವರಿಗೆ ನೀಡಲಾಗಿದೆ. ಈಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಸಾಧನೆ ಮಾಡಿರುವ ಇವರು, ಡಿಆರ್ಡಿಓದ ಪ್ರಮುಖ ಏಳು ಸಮೂಹಗಳನ್ನು ಮುನ್ನಡೆಸುತ್ತಿರುವ ಡೈರೆಕ್ಟರ್ ಜನರಲ್ಗಳಲ್ಲಿ ಒಬ್ಬರು.
ಹೈದರಾಬಾದ್ ಓಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಇವರು, ವೃತ್ತಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರ್. 1987ರಲ್ಲಿ ಡಿಆರ್ಡಿಓ ಸೇರಿದರು.
ಡೈರೆಕ್ಟರ್ ಜನರಲ್ ಆಗುವ ಮೊದಲು ಇವರು ಡಿಫೆನ್ಸ್ ಅವಿಯೋನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್(ಡಿಎಆರ್ಇ)ನ ನೇತೃತ್ವ ವಹಿಸಿದ್ದರು. ತಮ್ಮ ಕಾರ್ಯ ಚತುರತೆಗೆ ಇವರು ‘ಪರ್ಫಾರ್ಮನೆಸ್ ಎಕ್ಸಲೆನ್ಸ್’, ‘ದಿ ಸೈನ್ಟಿಸ್ಟ್ ಆಫ್ ದಿ ಇಯರ್-2011’ ಮತ್ತು ಇಂಡಿಯಾ ಟುಡೇ ಸಮಿತ್ ಅವಾರ್ಡ್ ಆಫ್ 2014 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಿಆರ್ಡಿಓದ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಲ್ಯಾಬೋರೇಟರಿ ಹೈದರಾಬಾದ್ನಲ್ಲಿ ಇವರು 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ವೇಗದ ಸಿಗ್ನಲ್ ಸ್ವಾಧೀನ ಗ್ರಾಹಕ, ಹೈ ಪವರ್ ಆರ್ಎಫ್ ಸಿಸ್ಟಮ್, ರಿಸ್ಪಾನ್ಸಿವ್ ಜಮ್ಮೆರ್ಸ್ ಮತ್ತು ವಿವಿಧ ಸಿಸ್ಟಮ್ಗಳಿಗೆ ಕಂಟ್ರೋಲರ್ ಸಾಫ್ಟ್ವೇರ್ಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿದ ಕೀರ್ತಿ ಇವರದ್ದು, ಇವೆಲ್ಲವುಗಳನ್ನೂ ಭೂಸೇನೆ, ವಾಯುಸೇನೆ, ನೌಕಾಸೇನೆ ಮತ್ತು ಪ್ಯಾರಾ ಮಿಲಿಟರಿಗಳಲ್ಲಿ ಪರಿಚಯಿಸಲಾಗಿದೆ.
ಒಬ್ಬ ಯಶಸ್ವಿ ವಿಜ್ಞಾನಿಯಾಗಿ, ಡಿಆರ್ಡಿಓದಲ್ಲಿ ಸೇವೆ ಸಲ್ಲಿಸಿ ದೇಶದ ಸೇನೆಯನ್ನು ಬಲಗೊಳಿಸಲು ಅವಿರತವಾಗಿ ಶ್ರಮಿಸಿದ ಮಂಜುಳಾ ಅವರು ಇನ್ನುಷ್ಟು ಸಾಧನೆಗಳನ್ನು ಮಾಡಲಿ ಎಂದು ಆಶಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.