ನವದೆಹಲಿ: ಥೈಲ್ಯಾಂಡ್ನಲ್ಲಿ ಉದ್ಯೋಗದ ಭರವಸೆಯನ್ನು ನೀಡಿ ಮೋಸ ಮಾಡುತ್ತಿರುವ ನಕಲಿ ಜಾಬ್ ರಾಕೆಟ್ಗಳ ಬಗ್ಗೆ ಐಟಿ ವೃತ್ತಿಪರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಥೈಲ್ಯಾಂಡ್ನಲ್ಲಿ ತೊಡಗಿರುವ ಸಂಶಯಾಸ್ಪದ ಐಟಿ ಸಂಸ್ಥೆಗಳು ‘ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್’ ಹುದ್ದೆಗಳಿಗೆ ಭಾರತೀಯ ಯುವಕರನ್ನು ಆಕರ್ಷಿಸುತ್ತಿವೆ. ನಂತರ ಕಾಲ್ ಸೆಂಟರ್ ಹಗರಣ ಮತ್ತು ಕ್ರಿಪ್ಟೋಕರೆನ್ಸಿ ವಂಚನೆಯಲ್ಲಿ ತೊಡಗುವಂತೆ ಮಾಡುತ್ತಿವೆ. ಈ ಬಗ್ಗೆ ಕೇಂದ್ರ ಎಚ್ಚರವಾಗಿರುವಂತೆ ತಿಳಿಸಿದೆ.
ಎರಡು ದಿನಗಳ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಥೈಲ್ಯಾಂಡಿನಲ್ಲಿ ಉದ್ಯೋಗದ ಭರವಸೆಯನ್ನು ನೀಡಿ ಬಳಿಕ ಭಾರತೀಯರನ್ನು ಅಕ್ರಮವಾಗಿ ಮ್ಯಾನ್ಮಾರ್ಗೆ ವರ್ಗಾವಣೆ ಮಾಡುವ ದಂಧೆ ನಡೆಯುತ್ತಿದ್ದು. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದರು.
“ಮ್ಯಾನ್ಮಾರ್ ಸ್ಥಳೀಯ ಭದ್ರತಾ ಪರಿಸ್ಥಿತಿಯಿಂದಾಗಿ ಅಸುರಕ್ಷಿತವಾಗಿದೆ” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ಮತ್ತು ದುಬೈ ಮತ್ತು ಭಾರತ ಮೂಲದ ಏಜೆಂಟ್ಗಳ ಮೂಲಕ ಥೈಲ್ಯಾಂಡ್ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗಗಳ ಹೆಸರಿನಲ್ಲಿ ವಂಚನೆಗೊಳಗಾದ ಐಟಿ ನುರಿತ ಯುವಕರನ್ನು ರಕ್ಷಿಸಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.