ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇಂದು ಮಾದರಿ ಕ್ರಮವೊಂದನ್ನು ಅಳವಡಿಸಲಾಗಿದೆ. ಇಂದಿನ ದಿನವನ್ನು ಮಹಿಳಾ ಶಾಸಕರಿಗೆ ಮಾತನಾಡಲು ಮತ್ತು ಮಹಿಳಾ ಕೇಂದ್ರಿತ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಮೀಸಲಿಡಲಾಗಿದೆ.
ಉತ್ತರಪ್ರದೇಶದ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಐದು ದಿನಗಳ ಕಾಲ ನಡೆಯಲಿದೆ.
ಭಾನುವಾರ ನಡೆದ ಸರ್ವಪಕ್ಷ ಮತ್ತು ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ 22 ಅನ್ನು ಮಹಿಳಾ ಕೇಂದ್ರಿತ ವಿಷಯಗಳ ಚರ್ಚೆಗೆ ಮೀಸಲಿಡುವ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಲಖಿಂಪುರ ಖೇರಿಯಲ್ಲಿ ಇಬ್ಬರು ದಲಿತ ಸಹೋದರಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ರಾಜ್ಯದಲ್ಲಿ ಮಹಿಳಾ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಲು ಸಿದ್ಧವಾಗಿರುವ ಸಮಯದಲ್ಲಿ ಈ ಕ್ರಮವು ಬಂದಿದೆ.
“ಸೆಪ್ಟೆಂಬರ್ 22 ರಂದು ಮಹಿಳಾ ಶಾಸಕರಿಗೆ ಮಾತನಾಡಲು ಅವಕಾಶ ನೀಡುತ್ತೇವೆ. ಇದು ದೇಶದ ಯಾವುದೇ ಶಾಸಕಾಂಗ ಸಭೆ ಇದುವರೆಗೆ ಮಾಡದ ಕೆಲಸವಾಗಿದೆ. ಪ್ರಶ್ನೋತ್ತರ ಅವಧಿಯ ನಂತರದ ಸಮಯವನ್ನು ಮಹಿಳಾ ಶಾಸಕರ ಚರ್ಚೆಗೆ ಮೀಸಲಿಡಲಾಗುವುದು” ಎಂದು ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
403 ಸದಸ್ಯರ ಯುಪಿ ವಿಧಾನಸಭೆಯಲ್ಲಿ ಕೇವಲ 47 ಮಹಿಳಾ ಶಾಸಕರಿದ್ದಾರೆ ಮತ್ತು ಈ ಪೈಕಿ 22 ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಪುರುಷ ಪ್ರಾಬಲ್ಯದ ಅಸೆಂಬ್ಲಿಯಲ್ಲಿ ಮಹಿಳಾ ಶಾಸಕರು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳಾ ಶಾಸಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ, ಪುರುಷ ಸದಸ್ಯರು ಮಾತನಾಡಲು ಪ್ರಾರಂಭಿಸಿದಾಗ ಕೆಲವು ಮಹಿಳೆಯರು ಮಾತನಾಡಲು ಹಿಂಜರಿಯುತ್ತಾರೆ ಎಂಬುದನ್ನು ನಾನು ಅರಿತುಕೊಂಡೆ. ಮಹಿಳಾ ಶಾಸಕರಿಗೆ ಮಾತನಾಡಲು ಒಂದು ದಿನವನ್ನು ಮೀಸಲಿಡುವುದಾಗಿ ನಾನು ಅವರಿಗೆ ಭರವಸೆ ನೀಡಿದ್ದೆ”ಎಂದು ಮಹಾನಾ ಹೇಳಿದ್ದಾರೆ.
Good Dession by CM @myogiadityanath Ji.
#योगीराज_में_आत्मनिर्भर_नारी pic.twitter.com/K5hopUTC3Y— Apurva Singh (@iSinghApurva) September 22, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.