ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಈಜಿಷ್ಟ್ಗೆ ತೆರಳಿದ್ದು, ಅಲ್ಲಿ ಅವರು ಸೋಮವಾರ ರಕ್ಷಣಾ ಸಚಿವ ಜನರಲ್ ಮೊಹಮ್ಮದ್ ಝಕಿ ಅವರನ್ನು ಕೈರೋದಲ್ಲಿ ಭೇಟಿಯಾದರು.
ದ್ವಿಪಕ್ಷೀಯ ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲು ಹಲವಾರು ಉಪಕ್ರಮಗಳ ಕುರಿತು ಅವರು ವ್ಯಾಪಕವಾದ ಚರ್ಚೆಗಳನ್ನು ನಡೆಸಿದರು. ಇಬ್ಬರೂ ಸಚಿವರು ರಕ್ಷಣಾ ಸಹಕಾರ ಕುರಿತ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು.
ಒಪ್ಪಂದಕ್ಕೆ ಸಹಿ ಹಾಕುವಿಕೆಯು ಭಾರತ-ಈಜಿಪ್ಟ್ ಸಂಬಂಧಗಳಿಗೆ ಹೊಸ ಪ್ರಚೋದನೆ ಮತ್ತು ಸಮನ್ವಯವನ್ನು ನೀಡುತ್ತದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಪರಿಶೀಲಿಸಲು, ಮಿಲಿಟರಿಯಿಂದ ಮಿಲಿಟರಿ ತೊಡಗಿಸಿಕೊಳ್ಳುವಿಕೆಯನ್ನು ತೀವ್ರಗೊಳಿಸಲು, ಹೊಸ ಉಪಕ್ರಮಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ರಾಜನಾಥ್ ಸಿಂಗ್ ಆ ದೇಶಕ್ಕೆ ಭೇಟಿ ನೀಡಿದ್ದಾರೆ.
Had an excellent meeting with Egypt’s Defence Minister, General Mohamed Zaki in Cairo. We had wide-ranging discussions on several initiatives to further expand bilateral Defence engagements. Signing of the MoU on Defence Cooperation adds new impetus and synergy to our relations. pic.twitter.com/NmlUOu9OmJ
— Rajnath Singh (@rajnathsingh) September 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.