ಬೆಂಗಳೂರು: ಹಿಂದೂಧರ್ಮದಲ್ಲಿ ಅತಿ ಪ್ರಮುಖ ಸ್ಥಾನವನ್ನು ಪಡೆದಿರುವ ತುಳಸಿಯಲ್ಲಿ ಅನೇಕ ಔಷಧಿಯ ಗುಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ವಿಜ್ಞಾನಿಗಳ ತಂಡವೊಂದು ಇದೇ ಮೊದಲ ಬಾರಿಗೆ ತುಳಸಿಯಲ್ಲಿ ಕಾಯಿಲೆಯನ್ನು ಗುಣಪಡಿಸುವ ಜಿನೋಮ್(ಸೂಕ್ಷ್ಮಜೀವಿ)ಯನ್ನು ಗುರುತಿಸಿದೆ.
ತುಳಸಿ ಗಿಡದಲ್ಲಿ 40ಕ್ಕೂ ಅಧಿಕ ವಿಶೇಷ ರಾಸಾಯನಿಕಗಳಿದ್ದು, ಇದು ವಿಶೇಷ ಔಷಧೀಯ ಮೌಲ್ಯಗಳನ್ನು ಹೊಂದಿದೆ ಎಂದು ಬೆಂಗಳೂರಿನಲ್ಲಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಸಂಭಾವ್ಯ ಔಷಧೀಯ ಗುಣಗಳನ್ನು ಹೊಂದಿರುವ ಸಂಯುಕ್ತಗಳನ್ನು ಉತ್ಪಾದಿಸಲು ಅಗತ್ಯವಾಗಿರುವ ಜೀನ್ಗಳನ್ನು ನಿರ್ಧರಿಸಲು ಜವಾಬ್ದಾರವಾಗಿರುವ ತುಳಸಿ ಗಿಡವನ್ನು ವಿಜ್ಞಾನಿಗಳು ಡಿಕೋಡ್ ಮಾಡಿದ್ದಾರೆ.
ತುಳಸಿಗೆ ಬ್ಯಾಕ್ಟೀರಿಯಾ ತಡೆಯುವ, ಶಿಲೀಂಧ್ರ ತಡೆಯುವ, ಜ್ವರವನ್ನು ತಡೆಯುವ ಶಕ್ತಿ ಇದೆ, ಅಲ್ಲದೇ ಕ್ಯಾನ್ಸರ್ ವಿರುದ್ಧ ಇದು ಹೋರಾಡುತ್ತದೆ ಎಂದೂ ಹೇಳಲಾಗಿದೆ.
ತುಳಸಿ ಭಾರತದ ಮೂಲವನ್ನು ಹೊಂದಿದ್ದು, 3 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇದು ಹಿಂದೂಗಳ ಪವಿತ್ರ ಗಿಡ. ಇದನ್ನು ಧಾರ್ಮಿಕ ಮತ್ತು ಔಷಧೀಯ ಕಾರಣಗಳಿಗಾಗಿ ಬೆಳೆಯಲಾಗುತ್ತದೆ. ಇದರ ಎಣ್ಣೆಯೂ ಮಹತ್ವವನ್ನು ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.