ಲಂಡನ್: ಯುಕೆ ರಾಣಿ ಎಲಿಜಬೆತ್ II ಅವರ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಸಂಜೆ ಲಂಡನ್ಗೆ ಆಗಮಿಸಿದ್ದಾರೆ.
ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್ನ ಬಾಲ್ಮೋರಲ್ ಕ್ಯಾಸಲ್ನ ಬೇಸಿಗೆ ನಿವಾಸದಲ್ಲಿ 96 ನೇ ವಯಸ್ಸಿನಲ್ಲಿ ನಿಧನರಾದ ರಾಣಿ ಎಲಿಜಬೆತ್ II ಅವರ ಅಂತ್ಯಸಂಸ್ಕಾರ ಸೆಪ್ಟೆಂಬರ್ 19 ರ ಬೆಳಿಗ್ಗೆ ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ನಡೆಯಲಿದೆ. ಪ್ರಸ್ತುತ ಅವರ ಪಾರ್ಥಿವ ಶರೀರ ವೆಸ್ಟ್ಮಿನಿಸ್ಟರ್ ಹಾಲ್ನಲ್ಲಿ ಇಡಲಾಗಿದೆ.
ರಾಷ್ಟ್ರಪತಿ ಮುರ್ಮು ಅವರು ಯುಕೆಗೆ ಮೂರು ದಿನಗಳ ಭೇಟಿಯಲ್ಲಿದ್ದಾರೆ, ಈ ಸಮಯದಲ್ಲಿ ಅವರು ಸೋಮವಾರ ಅಂತ್ಯಕ್ರಿಯೆಯ ಪಾಲ್ಗೊಳ್ಳುತ್ತಾರೆ. ಇಂದು ಸಂಜೆ ಕಿಂಗ್ ಚಾರ್ಲ್ಸ್ III ಅವರು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಯೋಜಿಸಿರುವ ವಿಶ್ವ ನಾಯಕರ ಸ್ವಾಗತಕ್ಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎಲಿಜಬೆತ್ II ರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ಯುನೈಟೆಡ್ ಕಿಂಗ್ಡಂನ ಲಂಡನ್ಗೆ ತೆರಳಿದ್ದಾರೆ” ಎಂದು ಅವರ ವಿಮಾನ ದೆಹಲಿಯಿಂದ ಹೊರಡುತ್ತಿದ್ದಂತೆ ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
President Droupadi Murmu emplanes for London, United Kingdom to attend the State Funeral of H.M. Queen Elizabeth II and offer condolences on behalf of the Government of India. pic.twitter.com/HEFkhoh62J
— President of India (@rashtrapatibhvn) September 17, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.