ಸಮರ್ಕಂಡ್: ಉಜ್ವೇಕಿಸ್ಥಾನದ ಸಮರ್ಕಂಡ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆ ಮಾತುಕತೆಯನ್ನು ನಡೆಸಿದರು.
ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಮೋದಿ ಮತ್ತು ಪುಟಿನ್ ಅವರ ಮೊದಲ ಮುಖಾಮುಖಿ ಭೇಟಿ ಇದಾಗಿದೆ.
ಈ ವೇಳೆ ಮೋದಿಯವರು, ಇಂದಿನ ಯುಗ ಯುದ್ಧದ ಯುಗವಲ್ಲ ಎಂದು ಪುಟಿನ್ಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪುಟಿನ್, ಭಾರತದ ಕಾಳಜಿಯನ್ನು ಅರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
“ಫೆಬ್ರವರಿಯಲ್ಲಿ ಪ್ರಾರಂಭವಾದ ಉಕ್ರೇನ್ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸುವುದಾಗಿ ಪುಟಿನ್ ಭಾರತದ ಪ್ರಧಾನಿಗೆ ತಿಳಿಸಿದರು ಮತ್ತು ಭಾರತವು ಯುದ್ಧದ ಬಗ್ಗೆ ಕಳವಳವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಂಡರು” ಎಂದು ಮೂಲಗಳು ತಿಳಿಸಿವೆ.
“ಉಕ್ರೇನ್ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವು, ನಿಮ್ಮ ಕಾಳಜಿಗಳು ನನಗೆ ತಿಳಿದಿದೆ. ಇದನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ” ಎಂದು ಪುಟಿನ್ ಮೋದಿಗೆ ತಿಳಿಸಿದ್ದಾರೆ.
Had a wonderful meeting with President Putin. We got the opportunity to discuss furthering India-Russia cooperation in sectors such as trade, energy, defence and more. We also discussed other bilateral and global issues. pic.twitter.com/iHW5jkKOW0
— Narendra Modi (@narendramodi) September 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.